Love cheating: ಲವ್ ಸೆ*ಕ್ಸ್ ದೋಖಾ – ಮದುವೆ ಹೆಸ್ರಲ್ಲಿ ಹನಿಮೂನ್ – ವಿದೇಶಕ್ಕೆ ಹಾರಿದ ಯುವಕ

Love cheating: ಬೆಂಗಳೂರಿನಲ್ಲೊಂದು ಲವ್ ಸೆಕ್ಸ್ ದೋಖಾ ಪ್ರಕರಣ ಬೆಳಕಿಗೆ ಬಂದಿದ್ದು, ಮದುವೆ ಹೆಸ್ರಲ್ಲಿ ಲೈಂಗಿಕ ಕ್ರಿಯೆ ನಡೆಸಿ ಯುವಕನೋರ್ವ ಫಾರಿನ್ ಗೆ ಎಸ್ಕೇಪ್ ಆದ ಘಟನೆ ನಡೆದಿದೆ. ಇದೀಗ ಆರೋಪಿ ಭರತ್ ಸೇರಿ ನಾಲ್ವರ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ. ಇನ್ಸ್ಸ್ಟಾದಲ್ಲಿ 22 ವರ್ಷದ ಯುವತಿಗೆ ಪರಿಚಯವಾಗಿದ್ದ ಭರತ್, ಇಬ್ಬರ ಜಾತಿ ಬೇರೆ ಬೇರೆಯಾಗಿದ್ರೂ ಅದನ್ನ ಬದಿಗಿಟ್ಟು ಮದುವೆಗೆ ಒಪ್ಪಿದ್ರು. ಇನ್ನೇನು ಮದುವೆ ಆಗ್ತೀವಲ್ಲ ಅಂಥೇಳಿ ಲೈಂಗಿಕ ಕ್ರಿಯೆ ಕೂಡ ನಡೆಸಿದ್ದ ಭರತ್.

ಅಷ್ಟೆ ಅಲ್ಲದೆ ಫ್ರಿ ವೆಡ್ಡಿಂಗ್ ಶೂಟ್, ಎಂಗೇಜ್ಮೆಂಟ್ ಅಂತ ಯುವತಿ ಕಡೆಯವರಿಂದ ಲಕ್ಷ ಲಕ್ಷ ಹಣ ಕೂಡ ಖರ್ಚು ಮಾಡಿದಿದ್ದ. ಆದ್ರೆ ಇನ್ನೇನೂ ಮದುವೆ ಟೈಮ್ ಹತ್ತಿರ ಬರ್ತಿದ್ದಂತೆ ಹುಡುಗ ಫಾರಿನ್ ಗೆ ಎಸ್ಕೇಪ್ ಆಗಿದ್ದಾನೆ. ಸಾಫ್ಟ್ ವೇರ್ ಇಂಜಿನಿಯರ್ ಆಗಿರೋ ಭರತ್, ಯುವತಿಗೆ ಇನ್ಸ್ ಸ್ಟ್ರಾದಲ್ಲಿ ಮೆಸೇಜ್ ಮಾಡಿ ಪರಿಚಯ ಮಾಡಿಕೊಂಡಿದ್ದ ಭರತ್. ನಿಮ್ಮ ಕಾರು ನನ್ನ ಏರಿಯಾದಲ್ಲಿ ಓಡಾಡ್ತಿದೆ ಅಂಥ ಫೋಟೋ ಕಳುಹಿಸಿದ್ದ, ನಿಮ್ಮ ಕಾರು ಚೆನ್ನಾಗಿದೆ ಅಂಥ ಮಾತು ಶುರುಮಾಡಿ ಯುವತಿಯ ಸ್ನೇಹ ಬೆಳೆಸಿದ್ದ. ಬಳಿಕ ಸ್ನೇಹ ಪ್ರೀತಿಗೆ ತಿರುಗಿ, ಮದುವೆ ಹಂತಕ್ಕೆ ತಲುಪಿತ್ತು.
ಆದ್ರೆ ಪ್ರೀತಿಗೆ ಜಾತಿ ಅಡ್ಡ ಬರಲ್ಲ ಅಂಥ ಹುಡುಗಿಯನ್ನ ಪ್ರೀತಿ ಬಲೆಗೆ ಬೀಳಿಸಿ ಮನೆಯವರನ್ನ ಮದುವೆಗೆ ಒಪ್ಪಿಸಿದ್ದ. ಎರಡು ಮನೆಯವರ ಸ್ಟೇಟಸ್ ಹೊಂದಿಕೊಂಡಿದ್ದರಿಂದ ಮದುವೆ ಪೋಷಕರು ಗ್ರೀನ್ ಸಿಗ್ನಲ್ ಕೊಟ್ಟಿದ್ರು. ಇದನ್ನೆ ಬಂಡವಾಳ ಮಾಡಿಕೊಂಡ ಭರತ್, ಯುವತಿಯನ್ನ ಲೈಂಗಿಕವಾಗಿ ಬಳಸಿಕೊಂಡು ಮೋಸ ಮಾಡಿದ್ದಾನೆ. ನೀನು ಕೆಳ ಜಾತಿಯವಳು ಅಂತೇಳಿ ಮೋಸ ಮಾಡಿ ಫಾರಿನ್ಗೆ ಎಸ್ಕೇಪ್ ಆಗಿರೋ ಬಗ್ಗೆ ಆರೋಪ ಮಾಡಲಾಗಿದೆ.
ಸದ್ಯ ಈ ಬಗ್ಗೆ ಯುವತಿಯಿಂದ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಎಫ್ಐಆರ್ ದಾಖಲಿಸಿ ಪೊಲೀಸರಿಂದ ತನಿಖೆ ಮುಂದುವರೆದಿದೆ. ಆರೋಪಿ ಪತ್ತೆಗಾಗಿ ಪೊಲೀಸರು ಬಲೆ ಬಿಸಿದ್ದಾರೆ.
Comments are closed.