Viral Audio : ‘ಆ ಹೆಂಗಸನ್ನು ಕೊಂದುಬಿಡು’ – ಕೋವಿಡ್ ಚಿಕಿತ್ಸೆ ನೀಡುತ್ತಿದ್ದ ವೈದ್ಯರ ಆಡಿಯೋ ವೈರಲ್

Share the Article

Viral Audio : ಕೊರೋನಾ ಬಂದ ಮಹಿಳೆ ಒಬ್ಬರು ಆಸ್ಪತ್ರೆಗೆ ಚಿಕಿತ್ಸೆಗೆ ಎಂದು ದಾಖಲಾದ ಸಂದರ್ಭದಲ್ಲಿ ಆ ಹೆಂಗಸನ್ನು ಕೊಂದುಬಿಡು ಎಂದು ವೈದ್ಯರು ಮಾತನಾಡುತ್ತಿರುವ ಆಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹೌದು, 2021ರಲ್ಲಿ ಕೊರೊನಾ ಮಿತಿಮೀರಿದ ಸಂದರ್ಭದಲ್ಲಿ ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯ ಹಿರಿಯ ವೈದ್ಯರು ಮತ್ತು ಸಹೋದ್ಯೋಗಿಯ ನಡುವಿನ ಸಂಭಾಷಣೆ ಇದೀಗ ವೈರಲ್ ಆಗಿದ್ದು, ಇದರಲ್ಲಿ ಸರ್ಕಾರಿ ವೈದ್ಯರು ಕೊರೊನಾ ರೋಗಿಯನ್ನು ಕೊಲ್ಲುವಂತೆ ತಮ್ಮ ಸಹೋದ್ಯೋಗಿಗೆ ಸೂಚಿಸಿದ್ದಾರೆ.

ಅಂದಹಾಗೆ 2021ರಲ್ಲಿ ಕೊರೊನಾ ಸಮಯದಲ್ಲಿ ದಯಾಮಿ ಅಜಿಮೋದ್ದೀನ್ ಗೌಸೋದ್ದೀನ್ ಅವರ ಪತ್ನಿ ಕೌಸರ್ ಫಾತಿಮಾ ಕೊರೊನಾದಿಂದ ಉದ್ಗೀರ್‌ನ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದರು. ಡಾ.ಶಶಿಕಾಂತ್ ಡಾಂ ಆ ಕೇಂದ್ರದಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು.

ಕೌಸರ್ ಫಾತಿಮಾ 10 ದಿನಗಳ ಕಾಲ ಅಲ್ಲಿಯೇ ಚಿಕಿತ್ಸೆ ಪಡೆದಿದ್ದರು. ಅವರು ಆಸ್ಪತ್ರೆಗೆ ದಾಖಲಾದ ಏಳನೇ ದಿನ ಅವರ ಪತಿ ಅವರ ಪಕ್ಕದಲ್ಲಿ ಊಟ ಮಾಡುತ್ತಾ ಕುಳಿತಿದ್ದರು. ಈ ಸಮಯದಲ್ಲಿ ಡಾ. ದೇಶಪಾಂಡೆ ಅವರಿಂದ ಡಾ.ಡಾಂಗೆ ಎಂಬ ಸಹೋದ್ಯೋಗಿಗೆ ಕರೆ ಬಂದಿದೆ. ಅವರು ಸ್ಪೀಕರ್‌ನಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಡಾ. ದೇಶಪಾಂಡೆ ಹಾಸಿಗೆ ಲಭ್ಯತೆಯ ಬಗ್ಗೆ ವಿಚಾರಿಸಿದ್ದು, ಡಾ.ಡಾಂಗೆ ಯಾವುದೇ ಖಾಲಿ ಹಾಸಿಗೆಗಳಿಲ್ಲ ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಡಾ. ದೇಶಪಾಂಡೆ ‘ಯಾರನ್ನೂ ಒಳಗೆ ಹೋಗಲು ಬಿಡಬೇಡಿ, ಆ ದಯಾಮಿ ಮಹಿಳೆಯನ್ನು ಕೊಲ್ಲು’ ಎಂದು ಹೇಳುವುದನ್ನು ಕೇಳಿಸಿಕೊಂಡಿದ್ದಾರೆ.

ಈ ಆಡಿಯೋ ಹಿನ್ನೆಲೆಯಲ್ಲಿ ವೈದ್ಯರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಡಾ. ಶಶಿಕಾಂತ್ ಡಾಂ ಹಾಗೂ ಡಾ. ದೇಶಪಾಂಡೆ ಆರೋಪಿಗಳು ಎಂದು ಉಲ್ಲೇಖಿಸಲಾಗಿದ್ದು ಎಫ್‌ಐಆರ್‌ನಲ್ಲಿ ಆಡಿಯೋ ಹಿಂದಿನ ವಿವರವನ್ನು ನೀಡಲಾಗಿದೆ.

Comments are closed.