ಪಾರಿವಾಳಗಳಿಗೆ ಕುಕ್ಕಳು ಕಾಳು ಹಾಕಿದ ವೃದ್ದೆ, 80,000 ರೂಪಾಯಿ ದಂಡ

Share the Article

Singapore : ತನ್ನ ಅಪಾರ್ಟ್‌ಮೆಂಟ್ ಬ್ಲಾಕ್‌ ಗೆ ಹಾರಿ ಬಂದು ಕೂತ ಪಾರಿವಾಳಗಳಿಗೆ ಆಹಾರ ನೀಡಿದ ಭಾರತೀಯ ಮೂಲದ 70 ವರ್ಷದ ವೃದ್ದೆಗೆ ಸಿಂಗಾಪುರದ ಅಧಿಕಾರಿಗಳು ಬರೋಬ್ಬರಿ 80,000 ರೂ. (930 ಡಾಲರ್) ದಂಡ ವಿಧಿಸಿದ್ದಾರೆ.

ಹಕ್ಕಿಗಳಿಗೆ ಕಾಲು ಚೆಲ್ಲುವುದು ವನ್ಯಜೀವಿ ಕಾಯ್ದೆ ಉಲ್ಲಂಘನೆ. ಆ ಹಕ್ಕಿಗಳಿಗೆ ಆಹಾರ ನೀಡಿದ ಹಿನ್ನೆಲೆಯಲ್ಲಿ ಷಣ್ಮುಗನಾಥನ್ ಶಾಮ್ಲಾ ಎಂಬ.ಮಹಿಳೆ ದೋಷಿಯಾಗಿದ್ದು, ಆಕೆಗೆ ದಂಡ ವಿಧಿಸಲಾಗಿದೆ.

ಸಿಂಗಾಪುರದ ಮಹಿಳೆಯ ಮನೆಯ ಬಳಿ ನ್ಯಾಷನಲ್ ಪಾರ್ಕ್ಸ್ ಜಾರಿ ಅಧಿಕಾರಿಗಳು ತಪಾಸಣೆ ನಡೆಸುವಾಗ ಆಕೆ ಹಕ್ಕಿಗಳಿಗೆ ಕುಕ್ಕಲು ಕಾಳು ಚೆಲ್ಲಿ ಸಿಕ್ಕಿಬಿದ್ದಿದ್ದರು. ಸಿಂಗಪುರದ ವನ್ಯಜೀವಿ ಕಾನೂನಿನ ಪ್ರಕಾರ, ನ್ಯಾಷನಲ್ ಪಾರ್ಕ್ಸ್ ಮಹಾನಿರ್ದೇಶಕರ ಲಿಖೀತ ಅನುಮತಿ ಇಲ್ಲದೆ ಸಿಂಗಾಪುರದಲ್ಲಿ ವನ್ಯಜೀವಿಗಳಿಗೆ ಆಹಾರ ನೀಡುವುದು ಅಕ್ರಮವಾಗಿದೆ. ಹಾಗಾಗಿ ಈ ಬೃಹತ್ ದಂಡ ವಿಧಿಸಲಾಗಿದೆ.

Comments are closed.