ದಕ ಜಿಲ್ಲೆಯಲ್ಲಿ ಹೊತ್ತಿ ಉರಿಯುತ್ತಿದೆ ಕೋಮು ಜ್ವಾಲೆ: ಹಾo, ಹೂಂ ಗೃಹ ಸಚಿವರೂ ಬರ್ತಿಲ್ಲ, ಉಸ್ತುವಾರಿಯ ಸುಳಿವೇ ಇಲ್ಲ!! ಸ್ಪೀಕರ್ ಸ್ಪೀಕರ್ ಆಫ್ !!!

Mangalore: ದಕ ಜಿಲ್ಲೆಯಲ್ಲಿ ಒಂದರ ಹಿಂದೆ ಒಂದು ಪ್ರತಿಕಾರದ ಸರಣಿ ಹತ್ಯೆಗಳು ಎನ್ನುವ ಕೊಲೆಗಳು ನಡೆದು ಕೋಮು ಜ್ವಾಲೆಯ ದಳ್ಳುರಿ ಧಗದಹಿಸುತ್ತಿದ್ದರೂ ಇದರ ನಿಯಂತ್ರಣಕ್ಕೆ ತಕ್ಷಣದಿಂದಲೇ ಸ್ಥಳಕ್ಕೆ ಬಂದು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದ್ದ ಗ್ಯಾರoಟಿ ಕೈ ಸರಕಾರದ ಹಾo, ಹೂಂ ಬಿರುದಾಂಕಿತ ಮಾನ್ಯ ಗೃಹ ಸಚಿವ ಪರಮೇಶ್ವರ್ ಕೂಡಾ ಇತ್ತ ಕಡೆ ಇಣುಕಿಯೂ ನೋಡದೆ ಮೌನಕ್ಕೆ ಶರಣಾಗಿದ್ದಾರೆ. ಅದೇ ರೀತಿ ಬೆಂಗಳೂರಿನಲ್ಲಿ ಕುಳಿತುಕೊಂಡು ತಾನು ದಕ ಜಿಲ್ಲೆಯ ಉಸ್ತುವಾರಿ ಸಚಿವರೆಂದು ಪೋಸು ಕೊಡುತ್ತ ಆಗೊಮ್ಮೆ ಈಗೊಮ್ಮೆ ಮಂಗಳೂರಿಗೆ ಬಂದು ಹಾಜರಾತಿ ಹಾಕಿ ಹೋಗುತ್ತಿರುವ ದಕ ಜಿಲ್ಲೆಯ ಹೆಮ್ಮೆಯ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಕೂಡ ತಾವು ಕೈಗೊಳ್ಳಬೇಕಾಗಿರುವ ಕಾನೂನು ಕ್ರಮಗಳ ಬಗ್ಗೆ ಮಾತನಾಡುವುದರ ಬದಲು ಬಂಟ್ವಾಳದ ಕೊಳ್ತಮಜಲಿನಲ್ಲಿ ನಡೆದ ಅಬ್ದುಲ್ ರಹಿಮಾನ್ ಕೊಲೆ ಘಟನೆಯ ಮರುದಿನವೇ ಶಿವಮೊಗ್ಗದಲ್ಲಿ ಕುಳಿತು ಬಿಜೆಪಿ ಹಾಗೂ ಸಂಘ ಪರಿವಾರದವರ ವಿರುದ್ಧ ಆರೋಪಗಳನ್ನು ಮಾಡುವುದಕ್ಕಷ್ಟೇ ಸೀಮಿತಗೊಳಿಸಿ ಇದೀಗ ಅವರು ಬೆಂಗಳೂರಿಗೆ ಪಲಾಯನಗೈದು ಮೌನಕ್ಕೆ ಶರಣಾಗಿದ್ದಾರೆ. ಅದೇ ರೀತಿ ಸ್ಪೀಕರ್ ಯುಟಿ ಖಾದರ್ ರ ತವರು ಜಿಲ್ಲೆಯಲ್ಲೇ ಇಂತಹ ದುರ್ಘಟನೆಗಳು ನಿರಂತರ ಪುನರಾವರ್ತನೆ ಆಗುತ್ತಿದ್ದರೂ ಅವರು ಕೂಡಾ ಸ್ಪೀಕರ್ ಆಫ್ ಮಾಡಿ ಮೌನಕ್ಕೆ ಶರಣಾಗಿದ್ದಾರೆ. ಯಾಕೆ ಕೊಳ್ತಮಜಲಿನ ಘಟನೆ ನಂತರ ಈ ಘಟಾನುಘಟಿಗಳು ಮಂಗಳೂರಿಗೆ ಬಂದಿಲ್ಲ ಎಂದು ನೋಡಿದರೆ, ಅದಕ್ಕೆ ಕೆಲವು ಬಲವಾದ ಕಾರಣ ಸಿಗುತ್ತಿದೆ.

ಕೆಲವು ದಿನಗಳ ಹಿಂದೆ ಬಜಪೆಯ ಸುಹಾಸ್ ಶೆಟ್ಟಿ ಕೊಲೆ ನಡೆದ ಬೆನ್ನಲ್ಲೇ ಎದ್ನೋ ಬಿದ್ನೋ ಎಂದು ಮಂಗಳೂರಿಗೆ ಧಾವಿಸಿದ್ದರು ಗೃಹ ಸಚಿವ ಪರಮೇಶ್ವರ್. ಮಾಧ್ಯಮದವರೊಂದಿಗೆ ಮಾತನಾಡುತ್ತಾ ಇನ್ನು ಮುಂದೆ ದಕ ಹಾಗೂ ಉಡುಪಿ ಉಭಯ ಜಿಲ್ಲೆಗಳಲ್ಲಿ ಸಂಪೂರ್ಣ ಕೋಮುಗಲಭೆ ನಿಯಂತ್ರಣಕ್ಕಾಗಿ ತಕ್ಷಣದಿಂದಲೇ ಟಾಸ್ಕ್ ಫೋರ್ಸ್ ತಂಡವನ್ನು ರಚಿಸಲಾಗುವುದು ಎಂದು ಭರವಸೆ ನೀಡಿ ಹೋಗಿದ್ದರು, ಹೀಗಾಗಿ ಸಚಿವರ ಮಾತನ್ನು ನಂಬಿದ ಉಭಯ ಕರಾವಳಿ ಜಿಲ್ಲೆಗಳ ಮಂದಿ ಮುಂದಿನ ದಿನಗಳಲ್ಲಾದರೂ ತಾವೆಲ್ಲರೂ ಶಾಂತಿ ನೆಮ್ಮದಿಯಿಂದ ಬದುಕಬಹುದೆಂಬ ಆಶಾಭಾವನೆ ಹೊಂದಿದ್ದರು. ಆದರೆ ಈವರೆಗೂ ಸಚಿವರ ಭರವಸೆ ಈಡೇರದೆ ಇರುವುದರಿಂದ ಹಿಂದೆ ಸಚಿವರು ನೀಡಿದ್ದ ಭರವಸೆ ಕೇವಲ ಆ ಕ್ಷಣದ ಅಬ್ಬರದ, ಬಣ್ಣದ ಬಾಯಿ ಮಾತಿಗಷ್ಟೇ ಸೀಮಿತ ಎಂಬಂತಾಗಿತ್ತು.
Pitta Headache: ಹೀಗೆ ಮಾಡಿದ್ರೆ ಥಟ್ ಅನ್ನೋದ್ರಲ್ಲಿ ಪಿತ್ತ ಕಡಿಮೆಯಾಗುತ್ತೆ
ಅದೇ ರೀತಿ ರಾಜಧಾನಿಯಲ್ಲಿ ಕೂತು ದಕ ಜಿಲ್ಲೆಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಸಚಿವ ದಿನೇಶ್ ಗುಂಡೂರಾವ್ ಸಹಾ ಜಿಲ್ಲೆಯಲ್ಲಿ ಸರಣಿಯಾಗಿ ನಡೆಯುತ್ತಿರುವ ಪ್ರತಿಕಾರದ ಕೋಮುಗಲಭೆಯ ನಿಯಂತ್ರಣದ ಬಗ್ಗೆ ಯಾವುದೇ ಕಠಿಣ ಕ್ರಮ ಕೈಗೊಳ್ಳದೆ ಕೈಕಟ್ಟಿ ಕುಳಿತುಕೊಂಡಿದ್ದಾರೆ.
USA: ಮಸ್ಕ್ ಮತ್ತು ಟ್ರಂಪ್ ನಡುವೆ ಬಿರುಕು: ಡೊನಾಲ್ಡ್ ಟ್ರಂಪ್ ಆಡಳಿತದಿಂದ ಎಲಾನ್ ಮಸ್ಕ್ ನಿರ್ಗಮನ
ಇನ್ನು ಸ್ವತಃ ಸ್ಪೀಕರ್’ರ ತವರು ಜಿಲ್ಲೆಯಲ್ಲೇ ಈ ರೀತಿಯ ಘಟನೆಗಳು ನಿರಂತರವಾಗಿ ಮರುಕಳಿಸುತ್ತಿದ್ದರೂ ಕೂಡಾ ಅವರು ಕೂಡ ಮೂಕ ಪ್ರೇಕ್ಷಕರಂತೆ ವರ್ತಿಸುತ್ತಿರುವುದರ ಬಗ್ಗೆ ಕೆಂಡಾಮಂಡಲರಾಗಿರುವ ದಕ ಜಿಲ್ಲೆಯ ಕಾಂಗ್ರೆಸ್ ನ ಮುಸ್ಲಿಂ ಮುಖಂಡರೆಲ್ಲರೂ ಗ್ಯಾರೆಂಟಿ ಕಾಂಗ್ರೆಸ್ಸನ್ನು ನಂಬಿದರೆ ಮುಂದೆ ನಮಗೆ ಗ್ಯಾರಂಟಿ ಉಳಿಗಾಲವಿಲ್ಲ ಎಂದು ತಿಳಿದು ಈಗಾಗಲೇ ಸಾಮೂಹಿಕವಾಗಿ ತಮ್ಮತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿ ಕಾಂಗ್ರೆಸ್ಸಿನಿಂದ ದೂರ ಉಳಿಯುವ ತೀರ್ಮಾನ ಕೈಗೊಂಡಿದ್ದಾರೆನ್ನಲಾಗುತ್ತಿದೆ.
ಅದೇ ರೀತಿ ಕಾಂಗ್ರೆಸ್ಸಿನ ಮುಸ್ಲಿಮೇತರರೂ ಕೂಡ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ಕಾಂಗ್ರೆಸ್ಸಿನ ಮಂತ್ರಿಗಳು, ಸಚಿವರು ಹಾಗೂ ಕಾಂಗ್ರೆಸ್ ಮುಖಂಡರ ವಿರುದ್ಧವೇ ತೀವ್ರ ಅಸಾಮಾಧಾನಗೊಂಡಿದ್ದಾರೆ ಎನ್ನಲಾಗುತ್ತಿದೆ.
ಹೀಗಾಗಿ ಉಭಯ ಜಿಲ್ಲೆಯಾದ್ಯಂತ ಇಡೀ ಮುಸ್ಲಿಂ ಸಮುದಾಯಗಳೆಲ್ಲರ ಸಹಿತ ಬಹುತೇಕ ಮುಸ್ಲೀಮೇತರ ಕಾಂಗ್ರೆಸಿಗರೆಲ್ಲರೂ ಒಂದಾಗಿ ಕಾಂಗ್ರೆಸ್ಸಿನ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸುತ್ತಿರುವುದರ ಸ್ಪಷ್ಟ ಸೂಚನೆ ಸಿಕ್ಕಿಯೇ ಗೃಹ ಸಚಿವ ಪರಮೇಶ್ವರಾದಿಯಾಗಿ, ಬೆಂಗಳೂರಿನಲ್ಲಿ ಕುರ್ಚಿಯಲ್ಲಿ ಕುಳಿತೇ ದಕ ಜಿಲ್ಲೆಯಾಚೆ ಇಣುಕು ನೋಟ ಬೀರುತ್ತಿರುವ ಉಸ್ತುವಾರಿ ಸಚಿವ ಹುದ್ದೆಯನ್ನು ನಿಭಾಯಿಸುತ್ತಿರುವ ದಿನೇಶ್ ಗುಂಡೂರಾವ್, ಸ್ಪೀಕರ್ ಯುಟಿ ಖಾದರ್ ಮುಂತಾದವರೆಲ್ಲರೂ ರೊಚ್ಚಿಗೆದ್ದಿರುವ ದಕ ಜಿಲ್ಲೆಯ ಮುಸ್ಲಿಂ ಸಮುದಾಯದ ಮಧ್ಯೆ ಬಂದರೆ ತಾವೆಲ್ಲಿ ಅಪ್ಪಚ್ಚಿಯಾಗುತ್ತೇವೋ ಎಂಬ ಭಯದಿಂದಲೋ ಏನೋ ಕಾಂಗ್ರೆಸ್ ಮುಖಂಡರಾದವರು ಯಾರೊಬ್ಬರೂ ದಕ ಜಿಲ್ಲೆಗೆ ಕಾಲಿಡಲು ಮುಂದಾಗುತ್ತಿಲ್ಲ ಎನ್ನಲಾಗುತ್ತಿದೆ.
ಕಾಂಗ್ರೆಸ್ ಮುಖಂಡರ ಮೇಲೆಯೇ ಈಗ ಹೆಚ್ಚಿನ ಆಕ್ರೋಶ ಕೇಳಿಬಂದ ಹಿನ್ನೆಲೆಯಲ್ಲಿ ಕರಾವಳಿಗೆ ಬಂದು ತೊಂದರೆಗೆ ಮತ್ತು ಅವಮಾನಕ್ಕೆ ಸಿಲುಕುವುದು ಬೇಡ ಅನ್ನೋದು ಕಾಂಗ್ರೆಸ್ ನಾಯಕರ ಲೆಕ್ಕಾಚಾರ. ಅವತ್ತು ಬೆಳ್ಳಾರೆಯಲ್ಲಿ, ಪ್ರವೀಣ್ ನೆಟ್ಟಾರ್ ಸಾವಿನ ನಂತರ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಸ್ವಲ್ಪ ಲೇಟಾಗಿ ಬಂದರು ಎಂಬ ಕಾರಣಕ್ಕಾಗಿ ಉದ್ರಿಕ್ತ ಜನರು ನಳೀನ್ ಕುಮಾರ್ ಕಟೀಲ್ ರವರ ಕಾರನ್ನು ಅಲ್ಲಾಡಿಸಿ ಇನ್ನೇನು ಉಲ್ಟಾ ಮಾಡೋದರಲ್ಲಿದ್ದರು. ಅವತ್ತು ಅದು ಸ್ವಲ್ಪದರಲ್ಲಿ ತಪ್ಪಿತ್ತು. ಇಂಥಹಾ ಪರಿಸ್ಥಿತಿ ತಮಗೆ ಮರುಕಳಿಸೋದು ಬೇಡ ಎಂದು ಕಾಂಗ್ರೆಸ್ ಪಾಳಯ ಸೀದಾ.ಬೆಂಗಳೂರು ಸೇರಿಕೊಂಡು ಸೇಫ್ ಆಗಿದ್ದಾರೆ.
Rain: ಕಾರಿಗೆ ಮಳೆ ನೀರು ಹಾರಿದ್ದಕ್ಕೆ ಬೆರಳು ಕಚ್ಚಿ ಮಾಂಸ ಹೊರಬರುವಂತೆ ವಿಕೃತಿ ಮೆರೆದ ವ್ಯಕ್ತಿ
Comments are closed.