Amitabh bachchan: ಅಯೋಧ್ಯೆಯಲ್ಲಿ ಭೂಮಿ ಖರೀದಿಸಿದ ನಟ ಅಮಿತಾಬ್ ಬಚ್ಚನ್- ಬೆಲೆ ಎಷ್ಟು ಗೊತ್ತಾ?!

Amitabh bachchan: ಬಾಲಿವುಡ್‌ನ ಹಿರಿಯ ನಟ ಅಮಿತಾಭ್ ಬಚ್ಚನ್ (Amitabh bachchan) ಅಯೋಧ್ಯೆಯಲ್ಲಿ ಮತ್ತೊಮ್ಮೆ ಭೂಮಿ ಖರೀದಿಸಿ ಹೊಸ ಹವಾ ಸೃಷ್ಟಿ ಮಾಡಿದ್ದಾರೆ. ಸರಯು ನದಿ ಪಕ್ಕದಲ್ಲಿ 25,000 ಚದರ ಅಡಿಯ ಭೂಮಿಯನ್ನು ಖರೀದಿ ಮಾಡಿದ್ದಾರೆ. ಈ ಭೂಮಿಗೆ ಬರೋಬ್ಬರಿ 40 ಕೋಟಿ ಎಂದು ಮೂಲಗಳು ತಿಳಿಸಿವೆ.

ಕಳೆದ ವರ್ಷದಲ್ಲಿ ನಟ ಅಮಿತಾಭ್ ಬಚ್ಚನ್ 14.5 ಕೋಟಿ ನೀಡಿ ಪ್ಲಾಟ್ ಖರೀದಿ ಮಾಡಿದ್ದರು. ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ಆಸ್ತಿಯನ್ನು ಖರೀದಿ ಮಾಡಿದ್ದಾರೆ. ಮಾರ್ಚ್ 2025ರ ವರದಿಯ ಪ್ರಕಾರ, ಅಮಿತಾಭ್ ಬಚ್ಚನ್ ರಾಮಮಂದಿರದಿಂದ ಸುಮಾರು 10 ಕಿಲೋ ಮೀಟರ್ ದೂರದಲ್ಲಿ 54,454 ಚದರ ಅಡಿ ಜಾಗವನ್ನು ಹರಿವಂಶ್ ರಾಯ್ ಬಚ್ಚನ್ ಟ್ರಸ್ಟ್ ಹೆಸರಿನಲ್ಲಿ ಖರೀದಿ ಮಾಡಿದ್ದಾರೆ.
ಅಮಿತಾಬ್ ಬಚ್ಚನ್ ಖರೀದಿಸಿದ ಭೂಮಿಯಲ್ಲಿ ತಂದೆ, ಖ್ಯಾತ ಹಿಂದಿ ಕವಿ ಹರಿವಂಶ್ ರಾಯ್ ಬಚ್ಚನ್‌ರ ಜೀವನ ಮತ್ತು ಸಾಹಿತ್ಯಕ್ಕೆ ಮೀಸಲಾಗಿರುವ ಸ್ಮಾರಕವನ್ನು ಭೂಮಿಯನ್ನು ಮಾಡಿಕೊಳ್ಳಬಹುದು ಹೇಳಲಾಗುತ್ತಿದೆ.
Comments are closed.