Mangaluru: ಅಬ್ದುಲ್‌ ರಹಿಮಾನ್‌ ಹತ್ಯೆ ಪ್ರಕರಣ – ಸ್ಪೋಟಕ ವಿಚಾರ ಬಿಚ್ಚಿಟ್ಟ ದ. ಕ ಎಸ್ಪಿ!!

Share the Article

Mangaluru : ಕರಾವಳಿಯಲ್ಲಿ ಸಂಚಲನ ಸೃಷ್ಟಿಸಿದ ಬಂಟ್ವಾಳದ(Bantwal) ಅಬ್ದುಲ್‌ ರಹಿಮಾನ್‌ (Abdul Rahiman) ಬರ್ಬರ ಹತ್ಯೆ ಪ್ರಕರಣದ ಮೂವರು ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಯವಲ್ಲಿ ಯಶಸ್ವಿಯಾಗಿದ್ದಾರೆ. ಈ ಬೆನ್ನಲ್ಲೇ ಮಂಗಳೂರು ಎಸ್ಪಿ ಈ ಪ್ರಕರಣದ ಕುರಿತು ಸ್ಫೋಟಕ ವಿಚಾರವನ್ನು ಬಿಚ್ಚಿಟ್ಟಿದ್ದಾರೆ.

ಹೌದು, ಪ್ರಮುಖ ಆರೋಪಿಗಳ ಬಂಧನದ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್ ಅವರು ಮಾಧ್ಯಮ ಪ್ರಕಟಣೆ ಹೊರಡಿಸಿ ಖಚಿತಪಡಿಸಿದ್ದಾರೆ. ಅಲ್ಲದೆ ಆರೋಪಿಗಳ ಪತ್ತೆಯಾಗಿ ಬಂಟ್ವಾಳ ಡಿವೈಎಸ್ಪಿ ವಿಜಯ ಪ್ರಸಾದ್ ಅವರನ್ನು ತನಿಖಾಧಿಕಾರಿಯನ್ನಾಗಿ ನೇಮಿಸಲಾಗಿತ್ತು. ಆರೋಪಿಗಳ ಪತ್ತೆಗಾಗಿ ಅವರ ನೇತೃತ್ವದಲ್ಲಿ ಐದು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಕನಪಾಡಿ ಎಂಬಲ್ಲಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಉಳಿದ ಆರೋಪಿಗಳ ಪತ್ತೆ ಕಾರ್ಯಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.

ಆರೋಪಿ ಮರಳು ತರಲು ಹೇಳಿದ್ದ:

ದೀಪಕ್ ಎಂಬ ಆರೋಪಿಯು ತನ್ನ ಕಟ್ಟಡದ ಕೆಲಸಕ್ಕೆ ತುರ್ತಾಗಿ ಒಂದು ಲೋಡ್ ಮರಳು ತರುವಂತೆ ಅಬ್ದುಲ್ ರಹಿಮಾನ್ ಗೆ ಕರೆ ಮಾಡಿದ್ದ. ಅಬ್ದುಲ್ ರಹಿಮಾನ್ ಯಾವುದರ ಪರಿವೆಯೂ ಇಲ್ಲದೆ, ಒಂದು ಲೋಡು ಮರಳು ಬಿಸಿನೆಸ್ ಸಿಕ್ಕ ಸಣ್ಣ ಖುಷಿಯಲ್ಲಿ ತರಾತುರಿಯಲ್ಲಿ ಮರಳು ಸಮೇತ ಗಾಡಿ ಹೊಂದಿಸಿದ್ದ.

ನಂತರ ಮರಳನ್ನ ಪಿಕಪ್ ವಾಹನದಲ್ಲಿ ತಂದು ಇಳಿಸುವಾಗ ಅಬ್ದುಲ್ ರಹಿಮಾನ್ ಮೇಲೆ ಹಲ್ಲೆ ನಡೆದಿತ್ತು. ಬೈಕಿನಲ್ಲಿ ಬಂದ ಇಬ್ಬರು ಅಬ್ದುಲ್ ನನ್ನು ಪಿಕಪ್ ನಿಂದ ಹೊರಕ್ಕೆ ಎಳೆದು ತಲವಾರಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು ಅನ್ನೋದು ಸದ್ಯ ತಿಳಿದಿರುವ ಮಾಹಿತಿ. ಇದೀಗ ಬಂಧಿತ ಆರೋಪಿಗಳು ಹತ್ಯೆಯಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆದರೆ ಹತ್ಯೆಗೆ ಮೂಲ ಕಾರಣ ಪ್ರೂರ್ವ ವೈಯಕ್ತಿಕ ದ್ವೇಷವೇ ಅಥವಾ ಪ್ರತೀಕಾರವಾಗಿ ಈ ಕೊಲೆ ನಡೆದಿತ್ತ ಅನ್ನುವ ಬಗ್ಗೆ ಪೊಲೀಸರು ಸದ್ಯಕ್ಕೆ ತುಟಿ ಬಿಡುತ್ತಿಲ್ಲ.

Comments are closed.