Hotel: ಹೋಟೆಲ್ ರೂಮುಗಳಲ್ಲಿ ಗಡಿಯಾರ ಯಾಕೆ ಇರೋದಿಲ್ಲ: ಮುಕ್ಕಾಲು ವಾಸಿ ಜನಕ್ಕೆ ಗೊತ್ತೇ ಇಲ್ಲ ಈ ಸತ್ಯ

Share the Article

Hotel: ಪ್ರತಿಯೊಬ್ಬರೂ ಒಂದಲ್ಲ ಒಂದು ಬಾರಿ ಹೋಟೆಲ್ ರೂಮ್ ಗಳಲ್ಲಿ ಉಳಿದುಕೊಂಡಿರುತ್ತಾರೆ. ಆದರೆ ಹೆಚ್ಚಾಗಿ ನಾವುಗಳು ಅಲ್ಲಿ ಸ್ಟೇ ಮಾಡಿ ಹೊರಟುಬಿಡುತ್ತೇವೆ, ಅಲ್ಲಿನ ಕೆಲವೊಂದು ವಿಷಯಗಳನ್ನು ಗಮನಿಸುವುದೇ ಇಲ್ಲ. ಹೌದು, ಹೋಟೆಲ್ ಲಾಡ್ಜ್ ಗಳ ರೂಮುಗಳಲ್ಲಿ ಗಡಿಯಾರಗಳೇ ಇರುವುದಿಲ್ಲ. ಯಾಕೆಂಬುದು ಹೆಚ್ಚಿನ ಜನರಿಗೆ ತಿಳಿದಿಲ್ಲ. ಅಷ್ಟಕ್ಕೂ ಅಲ್ಲಿ ಗಡಿಯಾರ ಇದೆಯೋ ಇಲ್ಲವೋ ಎಂದು ಕೂಡ ಯಾರು ನೋಡುವುದಿಲ್ಲ.

ಈ ಹೋಟೆಲ್ ರೂಮುಗಳಲ್ಲಿ ಗಡಿಯಾರದ ಇಡದ ಹಿಂದೆ ಒಂದು ಕಾರಣವಿದೆ. ಪ್ರಾವಸಕ್ಕೆಂದು ಅಥವಾ ಇನ್ಯಾವುದೋ ಕೆಲಸಕ್ಕೆಂದು ಮನೆ ಬಿಟ್ಟು ಹೊರಗಡೆ ಬಂದಿರುವವರು ವಿಶ್ರಮಿಸಲೆಂದು ರೂಮ್ ಗಳನ್ನು ಬುಕ್ ಮಾಡುತ್ತಾರೆ. ಅವರ ಪೂರ್ಣ ಗಮನ ವಿಶ್ರಾಂತಿಯ ಕಡೆಗೆ ಇರಲೆಂದು ಹಾಗೂ ಅವರು ಪದೇ ಪದೇ ಸಮಯ ನೋಡಿ ಯೋಚಿಸುತ್ತಿರಬಾರದೆಂದು ಈ ರೀತಿಯ ಕ್ರಮವನ್ನು ಅನುಸರಿಸಲಾಗುತ್ತದೆ.

ಇದರೊಂದಿಗೆ ಈ ರೀತಿಯಾಗಿ ಮಾಡುವುದರಿಂದ ಕೊಠಡಿ ಒಳಗಿನ ಗೋಡೆಯ ಮೇಲಿನ ವಿನ್ಯಾಸಗಳು ಅದ್ಭುತವಾಗಿ ಕಾಣುತ್ತವೆ, ಆ ಕೋಣೆಯಲ್ಲಿರುವ ಆಕರ್ಷಕ ವಸ್ತುಗಳು ಕಣ್ಣಿಗೆ ಮುದ ನೀಡುತ್ತವೆ ಇದು ಕೂಡ ಒಂದು ಕಾರಣವಾಗಿದೆ. ಜೊತೆಗೆ ಸಮಯದ ಒತ್ತಡ ಉಂಟಾಗದೆ ಅತಿಥಿಗಳು ನಿರಾಳವಾಗಿ ವಾಸ್ತವ್ಯ ಹೂಡಬಹುದಾಗಿದ್ದು, ಗಡಿಯಾರದ ಮುಳ್ಳುಗಳ ಶಬ್ಧವಿಲ್ಲದೆ ರೂಮ್ ಕೂಡ ಶಾಂತವಾಗಿರುತ್ತದೆ.
ಮುಂದಿನ ಬಾರಿ ಈ ರೀತಿಯ ವಾಸ್ತವ ಹೂಡಿದಾಗ ಗಡಿಯಾರ ಇಲ್ಲದಿದ್ದನ್ನು ಗಮನಿಸಿ, ಆ ಶಾಂತತೆಯನ್ನು ಬಳಸಿಕೊಂಡು ನಿರಾಳವಾಗಿರುವುದನ್ನು ನಾವು ಮರೆಯದಿರೋಣ.

Comments are closed.