Surathkal: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ: ಚಾಲಕಿ ಅಪಾಯದಿಂದ ಪಾರು

Surathkal: ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ ಉಂಟಾಗಿ ಕಾರು ಸುಟ್ಟು ಹೋದ ಘಟನೆ ಸುರತ್ಕಲ್ ಫ್ಲೈಓವರ್ ಕೆಳಭಾಗದಲ್ಲಿ ಇಂದು (ಮೇ 28) ಸಂಜೆ ನಡೆದಿದೆ.

ಕಾರು ಚಲಾಯಿಸುತ್ತಿದ್ದ ಮಹಿಳೆ ಬೆಂಕಿ ಕಂಡು ಕಾರಿನಿಂದ ಇಳಿದಿದ್ದು, ಅಪಾಯದಿಂದ ಪಾರಾಗಿದ್ದಾರೆ. ಕಾರಿನಲ್ಲಿದ್ದ ವಸ್ತುಗಳನ್ನು ಕೆಳಗಿಳಿಸಿದ್ದಾರೆ. ಶಾರ್ಟ್ಸರ್ಕ್ಯೂಟ್ ಗಿ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಸುರತ್ಕಲ್ ಪೊಲೀಸರ ತುರ್ತು ಕರೆಯ ಮೇರೆಗೆ ಎಚ್ಪಿಸಿಎಲ್ ಇದರ ಅಗ್ನಿಶಾಮಕ ದಳ ಹಾಗೂ ರಾಜ್ಯ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸುವಲ್ಲಿ ಶ್ರಮಿಸಿದೆ.
Comments are closed.