MP: ರಾಷ್ಟ್ರೀಯ ಹೆದ್ದಾರಿಯಲ್ಲಿ ಸೆ*ಕ್ಸ್ ನಡೆಸಿದ ಪ್ರಕರಣ – ‘ಕಾರು ನನ್ನದಲ್ಲ, ವಿಡಿಯೋದಲ್ಲಿ ಇರೋದು ನಾನಲ್ಲ’ ಎಂದು ಬಿಜೆಪಿ ನಾಯಕ

MP : ಇತ್ತೀಚಿಗೆ ಮಧ್ಯ ಪ್ರದೇಶದಲ್ಲಿ ಬಿಜೆಪಿ ನಾಯಕ ಮನೋಹರ್ ಲಾಲ್ ಧಾಕಡ್ ರಾಷ್ಟೀಯ ಹೆದ್ದಾರಿಯಲ್ಲಿ ಕಾರಿನಿಂದ ಇಳಿದು ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ವಿಚಿತ್ರ ಘಟನೆ ಒಂದು ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಈ ಬೆನ್ನಲ್ಲೇ ಮಧ್ಯಪ್ರದೇಶ ಬಿಜೆಪಿಯು ಅವರನ್ನು ಪಕ್ಷದಿಂದ ಉಚ್ಚಾಟಿಸಿತ್ತು. ಇದೀಗ ಈ ಕುರಿತು ಮನೋಹರ್ ಲಾಲ್ ಧಾಕಡ್ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ಹೌದು, ಮಧ್ಯಪ್ರದೇಶದ ಮಂಡ್ಸೌರ್ನ ಜಿಲ್ಲಾ ಪಂಚಾಯತ್ ಸದಸ್ಯ, ಬಿಜೆಪಿ ನಾಯಕ ಮನೋಹರ್ ಲಾಲ್ ಧಾಕಡ್ ರಾಷ್ಟೀಯ ಹೆದ್ದಾರಿಯಲ್ಲಿ ಕಾರಿನಿಂದ ಇಳಿದು ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾರೆ ಎನ್ನಲಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಬಿಜೆಪಿ ನಾಯಕನ ವಿರುದ್ಧ ಪ್ರಕರಣ ದಾಖಲಾಗಿತ್ತು. ಪೊಲೀಸರು ಅವರನ್ನು ಅರೆಸ್ಟ್ ಕೂಡ ಮಾಡಿದ್ದರು. ಆದರೆ ಈಗ ಈ ಕುರಿತು ಪ್ರತಿಕ್ರಿಯೆ ನೀಡಿರುವ ಮನೋಹರ್ ಲಾಲ್ ಈ ಕಾರು ನನ್ನದಲ್ಲ, ಆ ವಿಡಿಯೋದಲ್ಲಿ ಇರುವುದು ನಾನಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಯಸ್, ಸಾಮಾಜಿಕ ಮಾಧ್ಯಮದಲ್ಲಿ ಹರಡುತ್ತಿರುವ ವಿಡಿಯೋ ನಕಲಿ ಎಂದು ಮನೋಹರ್ ಧಕಾಡ್ ಹೇಳಿದ್ದಾರೆ. ನನ್ನ ವಿರುದ್ಧ ಪಿತೂರಿ ಮಾಡಿ, ನನ್ನ ಮಾನಹಾನಿ ಮಾಡಲು ಯತ್ನಿಸಿದ್ದಾರೆ ಎಂದು ಮನೋಹರ್ ಲಾಲ್ ಧಕಾಡ್ ಹೇಳಿದ್ದಾರೆ. ಅಲ್ಲದೆ ‘ವೈರಲ್ ಆಗಿರುವ ವಿಡಿಯೋ ನಕಲಿ. ಅದರಲ್ಲಿ ನಾನು ಇರಲಿಲ್ಲ, ಮತ್ತು ಕಾರು ಕೂಡ ನನ್ನದಲ್ಲ. ನಾನು ಕಾರನ್ನು ಮಾರಾಟ ಮಾಡಿದ್ದೆ. ವೀಡಿಯೊದ ಸತ್ಯಾಸತ್ಯತೆಯನ್ನು ತನಿಖೆ ಮಾಡಿದ ನಂತರ ಸತ್ಯ ಹೊರಬರುತ್ತದೆ. ನಾನು ನ್ಯಾಯಾಲಯದಲ್ಲಿ ನನ್ನ ಪರವಾಗಿ ಬಲವಾಗಿ ಮಂಡಿಸುತ್ತೇನೆ ಮತ್ತು ವೀಡಿಯೊವನ್ನು ವೈರಲ್ ಮಾಡಿದವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ’ ಎಂದು ಬಿಜೆಪಿ ನಾಯಕ ಹೇಳಿದ್ದಾನೆ.
Comments are closed.