Moodabidre: ಮೂಡುಬಿದಿರೆ: ವಿದ್ಯುತ್‌ ತಂತಿ ತುಳಿದು ಮಹಿಳೆ ಸಾವು

Share the Article

Moodabidre: ಮೂಡುಬಿದಿರೆ ತಾಲೂಕಿನ ಇರುವೈಲು ಗ್ರಾಮದ ಹೊಸಮಾರು ಪದವು ಬಂಗಾರುಗುಡ್ಡೆಯಲ್ಲಿ ಇಂದು ಬೆಳಗ್ಗೆ ಆಕಸ್ಮಿಕವಾಗಿ ವಿದ್ಯುತ್‌ ತಂತಿಯನ್ನು ತುಳಿದು ಮಹಿಳೆಯೊಬ್ಬರು ಸಾವಿಗೀಡಾದ ಘಟನೆ ನಡೆದಿದೆ.

ಕೃಷಿಕ ಕುಟುಂಬದ ಬಡ ಮಹಿಳೆ ಲಿಲ್ಲಿ ಡಿಸೋಜಾ (64) ಮೃತ ಮಹಿಳೆ.

ಇಂದು ಬೆಳಗ್ಗೆ ಲಿಲ್ಲಿ ಡಿಸೋಜಾ ಅವರು ಮನೆಯ ಹಿಂಬದಿಯ ಬಾಗಿಲು ತೆರೆದು ಹೊರಗೆ ಕಾಲಿಟ್ಟಾಗ ರಾತ್ರಿಯ ವೇಳೆ ಕಡಿದು ಬಿದ್ದಿದ್ದ ವಿದ್ಯುತ್‌ ತಂತಿಯನ್ನು ಗಮನಿಸದೆ ತುಳಿದಿದ್ದಾರೆ. ಕೂಡಲೇ ವಿದ್ಯುತ್‌ ಸ್ಪರ್ಶಕ್ಕೊಳಗಾಗಿ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಮಹಿಳೆಯ ಬೊಬ್ಬೆ ಕೇಳಿ ಓಡಿ ಬಂದ ಪುತ್ರನಿಗೆ ಆಕೆ ಮೃತಪಟ್ಟಿರುವುದು ತಿಳಿದು ಬಂದಿದೆ. ವಿದ್ಯುತ್‌ ಸಂಪರ್ಕ ಈ ಸಂದರ್ಭದಲ್ಲಿ ಕಡಿದು ಹೋಗಿತ್ತು.

ಲಿಲ್ಲಿ ಅವರು ಮನೆಯ ಹಿಂಭಾಗದ ವಿದ್ಯುತ್‌ ಲೈನಿನ ಸರ್ವಿಸ್‌ ವೈರ್‌ನಲ್ಲಿ ಸ್ಪಾರ್ಕ್‌ ಆಗುತ್ತಿರುವ ಕುರಿತು ಮೆಸ್ಕಾಂ ಕಚೇರಿಗೆ ದೂರವಾಣಿ ಮೂಲಕ ತಿಳಿಸಿದ್ದರು ಎಂದು ವರದಿಯಾಗಿದೆ. ಆದರೆ ಮೆಸ್ಕಾಂ ಅಧಿಕಾರಿಗಳು ದುರಸ್ತಿ ಮಾಡಿರಲಿಲ್ಲ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.

Comments are closed.