Mangalore: ಕೊಲೆ ಪ್ರಕರಣದಿಂದ ಮಂಗಳೂರು ಉದ್ವಿಗ್ನ ಹಿನ್ನೆಲೆ: ಶವಯಾತ್ರೆಗೆ ಪೊಲೀಸ್ ಭದ್ರತೆ

Mangalore: ನಿನ್ನೆ ನಡೆದ ಕೊಲೆ ಪ್ರಕರಣದಿಂದಾಗಿ ಮಂಗಳೂರು ಉದ್ವಿಗ್ನಗೊಂಡಿರುವ ಕಾರಣ ರಹೀಮ್ ಶವಯಾತ್ರೆಗೆ ಪೊಲೀಸ್ ಭದ್ರತೆಯನ್ನು ಕಲ್ಪಿಸಲಾಗಿದೆ. ಮಸೀದಿಯಿಂದ ಮೆರವಣಿಗೆ ಹೊರಟಿದ್ದು, ದಾರಿಯುದ್ದಕ್ಕೂ ಬಿಗಿ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ.

ಯಾವುದೇ ರೀತಿಯ ಅಹಿತಕರ ಘಟನೆ ನಡೆಯದ ರೀತಿಯಲ್ಲಿ ಈಗಾಗಲೇ ನಿನ್ನೆಯಿಂದ ಮೂರು ದಿನ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ನಿನ್ನೆ ಬಂಟ್ವಾಳ ತಾಲೂಕಿನ ಕುರಿಯಾಳ ಸಮೀಪದ ಇರಾಕೋಡಿ ಎಂಬಲ್ಲಿ ದುಷ್ಕರ್ಮಿಗಳು ಅಬ್ದುಲ್ ರಹಿಮಾನ್ ಮತ್ತು ಕಲಂದರ್ ಶಾಫಿ ಮೇಲೆ ಭೀಕರ ಹಲ್ಲೆ ಮಾಡಿದ್ದು, ಈ ಘಟನೆಯಲ್ಲಿ ಅಬ್ದುಲ್ ರಹಿಮಾನ್ ಸಾವಿಗೀಡಾಗಿದ್ದು, ಶಾಫಿ ಆಸ್ಪತ್ರೆಗೆ ದಾಖಲಾಗಿದ್ದಾನೆ.
Comments are closed.