Mangalore: ಲಂಚ ಸ್ವೀಕರಿಸುತ್ತಿದ್ದಾಗ ಗಣಿ & ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕಿ ಮತ್ತು ಚಾಲಕ ಲೋಕಾಯುಕ್ತ ಬಲೆಗೆ

Share the Article

Mangalore: ಉಳ್ಳಾಲ ತಾಲೂಕಿನ ಇರಾ ಗ್ರಾಮದ ಸರ್ವೆ ನಂಬರ್‌ 279/5 ರಲ್ಲಿ 1.39 ಎಕರೆ ಜಮೀನಿನ ಪೈಕಿ 0.35 ಎಕರೆ ಪ್ರದೇಶದಲ್ಲಿ ಮನೆ ಕಟ್ಟಲು ಜಾಗದಲ್ಲಿದ್ದ ಕಟ್ಟಡ ಕಲ್ಲು ತೆರವು ಮಾಡಿ ಸಮತಟ್ಟು ಮಾಡಲು ಮಂಗಳೂರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಇದಕ್ಕೆ ಉಳ್ಳಾಲ ತಹಶೀಲ್ದಾರರು ಪ್ರಮಾಣ ಪತ್ರ ನೀಡಿರುತ್ತಾರೆ. ಆದರೆ ಇದಕ್ಕೆ ಗಣಿ ಇಲಾಖೆಯಲ್ಲಿ ಅನುಮತಿ ಪತ್ರ ನೀಡಿರುವುದಿಲ್ಲ.

ಇದನ್ನು ವಿಚಾರಿಸಲೆಂದು ಹೋದಾಗ ಗಣಿ ಇಲಾಖೆಯ ಉಪ ನಿರ್ದೇಶಕಿ ಕೃಷ್ಣವೇಣಿಯ ಕೊಠಡಿಗೆ ಸಿಬ್ಬಂದಿ ಪ್ರದೀಪ್‌ ಎಂಬುವವರನ್ನು ಕರೆಸಿ ಫೈಲಿಗೆ ಅನುಮತಿ 50 ಸಾವಿರ ತೆಗೆದುಕೊಳ್ಳಿ ನಂತರ ಸಹಿ ಮಾಡುವ ಎಂದು ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಕುರಿತು ಮಂಗಳೂರು ಪೊಲೀಸ್‌ ಠಾಣೆಯಲ್ಲಿ ದೂರುದಾರರು ದೂರು ನೀಡಿದ್ದರು.

ಮೇ 28 ರಂದು ದೂರುದಾರರ ಕೈಯಿಂದ ವಾಹನ ಚಾಲಕ ಮಧು ಎಂಬಾತನ ಮೂಲಕ ಉಪನಿರ್ದೇಶಕಿ ಕೃಷ್ಣವೇಣಿ ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ರೆಡ್‌ಹ್ಯಾಂಡ್‌ ಆಗಿ ವಾಹನ ಚಾಲಕ ಮಧು ಮತ್ತು ಉಪ ನಿರ್ದೇಶಕಿ ಕೃಷ್ಣವೇಣಿಯನ್ನು ಬಂಧನ ಮಾಡಿದ್ದು, ವಿಚಾರಣೆ ಮಾಡುತ್ತಿದ್ದಾರೆ.

 

Comments are closed.