Shivrajkumar: ಕನ್ನಡ ಹುಟ್ಟಿದ್ದು ತಮಿಳಿನಿಂದ ಎಂದ ಕಮಲ್ ಹಾಸನ್ – ಅಲ್ಲೇ ಇದ್ದ ಶಿವಣ್ಣ ಏನು ಮಾಡಿದ್ರು ಗೊತ್ತಾ?

Shivrajkumar: ಮಣಿರತ್ನಂ ಹಾಗೂ ಕಮಲ್ ಹಾಸನ್ ನಟನೆಯ ‘ಥಗ್ ಲೈಫ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇತ್ತೀಚೆಗೆ ಚೆನ್ನೈನಲ್ಲಿ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮ ಕೂಡ ನಡೆದಿದೆ. ಇದಕ್ಕೆ ಕನ್ನಡ ನಟ ಶಿವರಾಜ್ಕುಮಾರ್ ಮುಖ್ಯ ಅತಿಥಿಯಾಗಿ ಹೋಗಿದ್ದರು. ಈ ಕಾರ್ಯಕ್ರಮದಲ್ಲಿ ಕಮಲ್ ಹಾಸನ್ ಅವರು ಕನ್ನಡ ಹುಟ್ಟಿದ್ದು ತಮಿಳಿನಿಂದ ಎಂದು ಹೇಳಿಕೆ ನೀಡಿ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಹೌದು, ತಮಿಳಿನಿಂದ ಹುಟ್ಟಿದ್ದು ನಿಮ್ಮ ಭಾಷೆ(ಕನ್ನಡ). ಹಾಗಾಗಿ ನೀವು ಅದರಲ್ಲಿ ಒಂದು” ಎಂದು ಕಮಲ್ ಹಾಸನ್ ಶಿವರಾಜ್ ಕುಮಾರ್ ಗೆ ಹೇಳುವ ಮೂಲಕ ಕನ್ನಡ ಭಾಷೆ ತಮಿಳು ಭಾಷೆಯಿಂದ ಹುಟ್ಟಿದೆ ಎಂದು ಹೇಳಿಕೆ ನೀಡಿ ವಿವಾದವನ್ನು ಸೃಷ್ಟಿಸಿದ್ದಾರೆ. ಈ ಬೆನ್ನಲ್ಲಿ ಕರ್ನಾಟಕದ ಅತ್ಯಂತ ಆಕ್ರೋಶ ವ್ಯಕ್ತವಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಕಮಲ್ ಹಾಸನ್ ಗೆ ಸಿಕ್ಕಾಪಟ್ಟೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ಬೆನ್ನಲ್ಲೇ ಕಮಲ್ ಹಾಸನ್ ಹೀಗೆ ಹೇಳುವಾಗ ಅಲ್ಲೇ ಇದ್ದ ಶಿವರಾಜಕುಮಾರ್ ಏನು ಮಾಡುತ್ತಿದ್ದರು ಎಂದು ಅನೇಕರು ಪ್ರಶ್ನಿಸಿದ್ದಾರೆ. ಹಾಗಿದ್ದರೆ ಶಿವಣ್ಣ ಕಮಲ ಹಾಸನ್ ಹೇಳಿದ ಈ ಹೇಳಿಕೆಗೆ ಏನು ಮಾಡಿದರು ಗೊತ್ತಾ?
ತಮಿಳುನಾಡಿಗೆ ಬಂದ ಶಿವರಾಜ್ಕುಮಾರ್ ಅವರನ್ನು ಸ್ವಾಗತಿಸಿದ ಕಮಲ್ ಹಾಸನ್, ಕನ್ನಡಿಗರ ಪ್ರೀತಿ ಮತ್ತು ಗೌರವಾದರಗಳಿಗೆ ನಮಿಸುತ್ತ ಮಾತನಾಡಿದ ಕಮಲ್ ಹಾಸನ್, ʻಆ ಊರಲ್ಲಿರುವ ನನ್ನ ಕುಟುಂಬ ಅದು. ಅದಕ್ಕಾಗಿಯೇ ಅವರು ಇಲ್ಲಿ ಬಂದಿದ್ದಾರೆ. ಹಾಗಾಗಿಯೇ ನಾನು ಮಾತು ಆರಂಭಿಸುವಾಗಲೇ ಉಸಿರೇ ತಮಿಳೇ ಎಂದೆ. ಏಕೆಂದರೆ ಕನ್ನಡವೂ ತಮಿಳಿನಿಂದ ಹುಟ್ಟಿ ಬೆಳೆದ ಭಾಷೆ. ನೀವೂ ಸಹ ಅದರೊಳಗೊಬ್ಬರುʼ ಎಂದು ಕಮಲ್ ಹಾಸನ್ ಹೇಳಿದ್ದಾರೆ. ಇದಕ್ಕೆ ವೇದಿಕೆಯ ಮುಂದೆ ಕುಳಿತಿದ್ದ ಶಿವಣ್ಣ ಹೌದು ಎಂದು ತಲೆ ಅಲ್ಲಾಡಿಸಿ ಕಮಲ್ ಹೇಳಿಕೆಗೆ ಕೈಮುಗಿದಿದ್ದಾರೆ. ಇದು ಕನ್ನಡ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದೆ.
https://x.com/abhispake/status/1927052112661303785?t=LS9_Ma48B0dN0Gb-18iCJg&s=19
Comments are closed.