Kamal Haasan: ‘ಯಾವುದೇ ಕಾರಣಕ್ಕೂ ಕನ್ನಡಿಗರ ಕ್ಷಮೆ ಕೇಳಲ್ಲ’ – ಮತ್ತೆ ಉದ್ಧಟತನ ಮೆರೆದ ಕಮಲ್ ಹಾಸನ್

Share the Article

Kamal Haasan: ಮಣಿರತ್ನಂ ಹಾಗೂ ಕಮಲ್ ಹಾಸನ್ ನಟನೆಯ ‘ಥಗ್ ಲೈಫ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಮೊನ್ನೆ ತಾನೇ ‘ಥಗ್ ಲೈಫ್’ ಸಿನಿಮಾ ಪ್ರಮೋಷನ್​ಗಾಗಿ ಬೆಂಗಳೂರಿಗೆ ಬಂದಿದಾಗ. ಈ ಕಾರ್ಯಕ್ರಮದಲ್ಲಿ ಕಮಲ್ ಹಾಸನ್ ಅವರು ಕನ್ನಡ ಹುಟ್ಟಿದ್ದು ತಮಿಳಿನಿಂದ ಎಂದು ಹೇಳಿಕೆ ನೀಡಿ ಆಕ್ರೋಶಕ್ಕೆ ಗುರಿಯಾಗಿದ್ದರು. ಈ ಬೆನ್ನಲ್ಲೇ ಕರ್ನಾಟಕದದ್ಯಂತ ಕಮಲ್ ಹಾಸನ್ ಕ್ಷಮೆ ಕೇಳಬೇಕೆಂದು ಆಗ್ರಹಿಸಲಾಗಿತ್ತು. ಆದರೆ ಇದೀಗ ನಾನು ಕ್ಷಮೆ ಕೇಳಲ್ಲ ಎಂದು ಕಮಲ್ ಹಾಸನ್ ಮತ್ತೆ ಉದ್ಧಟತನ ತೋರಿದ್ದಾರೆ.

 

ಹೌದು, ತಮ್ಮ ಸಿನಿಮಾ ಪ್ರಮೋಷನ್ ವೇಳೆ ನಟ ಕಮಲ್ ಹಾಸನ್ ಅವರು ನಟ ಶಿವರಾಜ್ ​ಕುಮಾರ್ ಎದುರೇ ನಿಮ್ಮ ಕನ್ನಡ ಹುಟ್ಟಿದ್ದು ತಮಿಳು ಭಾಷೆಯಿಂದ ಎಂದು ನಾಲಿಗೆ ಹರಿಬಿಟ್ಟಿದ್ದರು. ಇಷ್ಟೆಲ್ಲಾ ಆದರೂ, ಕಮಲ್ ಹಾಸನ್ ಕ್ಷಮೆ ಕೇಳುವುದಿಲ್ಲ ಎಂದು ವಾದಿಸುತ್ತಿದ್ದಾರೆ.

 

ಈ ಕುರಿತಾಗಿ ಮಾತನಾಡಿದ ಅವರು ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ. ನಾನು ಪ್ರೀತಿಯಿಂದ ಹಾಗೆ ಹೇಳಿದ್ದೇನೆ. ಯಾರನ್ನೂ ನೋಯಿಸುವ ಉದ್ದೇಶವನ್ನು ಇರಲಿಲ್ಲ. ಆದ್ದರಿಂದ ನನ್ನ ಮಾತಿಗೆ ತಾವು ಬದ್ಧನಾಗಿರುತ್ತೇನೆ. ಬಹಳಷ್ಟು ಇತಿಹಾಸಕಾರರು ನನಗೆ ಭಾಷೆ ಮತ್ತು ಭಾಷೆಯ ಇತಿಹಾಸ ತಿಳಿಸಿರುವಂತೆ ನಾನು ಮಾತನಾಡಿದ್ದೇನೆ ಎಂದು ತೇಪೆ ಹಚ್ಚುವ ಕೆಲಸ ಮಾಡಿದ್ದಾರೆ.

 

ಅಲ್ಲದೆ ಕಮಲ್ ಹಾಸನ್, ನಾನು ಪ್ರೀತಿಯಿಂದ ಹೇಳಿದ್ದಕ್ಕೆ ಕ್ಷಮೆಯಾಚಿಸುವುದಿಲ್ಲ ಎಂದು ಹೇಳುಚ ಮೂಲಕ ನಟ ಕ್ಷಮೆಯಾಚಿಸಲು ನಿರಾಕರಿಸಿ, ಮತ್ತೆ ಉದ್ಧಟತನ ತೋರಿದ್ದಾರೆ

Comments are closed.