B-khata Registration: ಬಿ ಖಾತ ರಿಜಿಸ್ಟ್ರೇಶನ್ ಮತ್ತೆ ಓಪನ್:ರಿಜಿಸ್ಟರ್ ಆಗದೆ ಪರದಾಡುತ್ತಿದ್ದವರಿಗೆ ಸಿಹಿಸುದ್ದಿ

Bengaluru: ಬಿ ಖಾತ ರಿಜಿಸ್ಟ್ರೇಶನ್ ಗಳನ್ನು ಮುಂದಿನ ವಾರದಿಂದ ಮತ್ತೆ ನೋಂದಣಿ ಮಾಡಲು ಸರಕಾರ ತೀರ್ಮಾನಿಸಿದೆ.
ಕಳೆದ ಅಕ್ಟೋಬರ್ 30 ರಿಂದ ಇ ಸ್ವತ್ತು ಆಗದ ಯಾವುದೇ ಸೈಟ್ ರಿಜಿಸ್ಟ್ರೇಷನ್ ಆಗುತ್ತಿರಲಿಲ್ಲ. ಇದೀಗ ಬಿಬಿಎಂಪಿ ಹಾಗೂ ಆರ್ಡಿಪಿಆರ್ ಇಲಾಖೆ ಜೊತೆ ಮಾತುಕತೆ ಆಗಿ, 2024 ಅಕ್ಟೋಬರ್ 31 ರೊಳಗೆ ಯಾವುದೆಲ್ಲಾ ಬಿ ಖಾತಾ ರಿಜಿಸ್ಟ್ರೇಷನ್ ಆಗಿದೆಯೋ ಅಂತಹ ಸೈಟ್ಗಳಿಗೆ ಇ ಸ್ವತ್ತು ನೀಡಲು ನಿರ್ಧರಿಸಲಾಗಿದೆ ಎಂದು ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕ ಆಯುಕ್ತ ಕೆ.ಎ ದಯಾನಂದ ಹೇಳಿದ್ದಾರೆ.
ಹಾಗೂ 30 ಲಕ್ಷಕ್ಕಿಂತ ಮೇಲ್ಪಟ್ಟ ಆಸ್ತಿ ನೋಂದಣಿಗೆ ಪ್ಯಾನ್ ಕಾರ್ಡ್ ಫಾರ್ಮ್ ಕಡ್ಡಾಯವಾಗಿದ್ದು, ರಿಜಿಸ್ಟ್ರೇಷನ್ ಜೊತೆಯೇ ಪಾನ್ ಕಾರ್ಡ್ ಸಹಿಯುಳ್ಳ ಪ್ರತ್ಯೇಕ ಫಾರ್ಮ್ ಕೊಡಲೇಬೇಕಾಗಿರುವುದರಿಂದ ಐಟಿ ಇಲಾಖೆಗೆ ಯಾಮಾರಿಸುವುದನ್ನು ತಡೆಯಬಹುದಾಗಿದೆ.
ಇನ್ನು ರಿಜಿಸ್ಟ್ರೇಷನ್ಗೆ ಸಂಬಂಧಿಸಿದಂತೆ ಕೆಲವು ಬದಲಾವಣೆಗಳನ್ನು ಮಾಡಿದ್ದು, ಇತ್ತೀಚೆಗಷ್ಟೇ ಆಸ್ತಿಯಲ್ಲಿ ಮಾಲೀಕರ ಹೆಸರು ಸೇರ್ಪಡೆ ಮಾಡುವುದಕ್ಕೆ ಸಹ ಶುಲ್ಕ ನಿಗದಿ ಮಾಡಲಾಗಿತ್ತು. ಇದು ಆಸ್ತಿಗಳ ಮಾರಾಟ ಹಾಗೂ ಖರೀದಿಯಲ್ಲಿ ಆಗುವ ಮೋಸವನ್ನು ತಪ್ಪಿಸುವ ಉದ್ದೇಶವನ್ನು ಹೊಂದಿದ್ದಾರೆ.
ಸೈಟ್ ರಿಜಿಸ್ಟ್ರೇಷನ್ ಹೊಸ ನಿಯಮದಲ್ಲಿ ಆಧಾರ್ ಕಾರ್ಡ್ ಜೋಡಣೆ ಕೂಡ ಮಾಡಿರಬೇಕು. ಸರಿಯಾದ ಮೊಬೈಲ್ ನಂಬರ್, ಬಯೋಮೆಟ್ರಿಕ್ ಆಸ್ಟ್ರೇಟ್ ಹಾಗೂ ಹೆಸರು ಹೊಂದಾಣಿಕೆ ಆಗಿದೆಯಾ ಎಂದು ನೋಡಿಕೊಳ್ಳಬೇಕು ಎಂದಿದ್ದಾರೆ.
Comments are closed.