Bengaluru: AI ಅಳವಡಿಕೆ: 8,000 ಉದ್ಯೋಗಿಗಳನ್ನು ಮನೆಗೆ ಕಳಿಸಿದ IBM

Share the Article

Bengaluru: ಬರ ಬರುತ್ತಾ ಎಐ ಗಳ ಹಾವಳಿ ಹೆಚ್ಚಾಗುತ್ತಿದ್ದು, ಎಷ್ಟೋ ಜನರು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಹೌದು ಪ್ರತಿಷ್ಠಿತ ಐಟಿ ಕಂಪೆನಿಯಾದಂತಹ ಐಬಿಎಂ (IBM) ತನ್ನ 8,000 ಉದ್ಯೋಗಿಗಳನ್ನು ವಜಾಗೊಳಿಸಿದೆ.

2023ರಿಂದ IBM ತನ್ನ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುತ್ತಿದ್ದು ಹೆಚ್ಚಾಗಿ ಎಚ್ ಆರ್ ಗಳನ್ನೇ ವಜಾಗೊಳಿಸುತ್ತಿದೆ. ಹಾಗೂ ಎಚ್ ಆರ್ ವಿಭಾಗದ 200 ಹೆಚ್ಚು ರೀತಿಯ ಕೆಲಸಗಳನ್ನು ನಿಭಾಯಿಸಲು AskHR ಎಂಬ AI ತಂತ್ರಜ್ಞಾನವನ್ನು ಬಳಸುತ್ತಿದೆ. ಹಿಂದಿನ 10 ಜನರ ಕೆಲಸ ಈಗ ಎಐ ಒಂದೇ ಮಾಡುತ್ತಿದ್ದು, ಇದರ ಅಳವಡಿಕೆಯ ನಂತರ 3.5 ಬಿಲಿಯನ್ ಡಾಲರ್ ಅನ್ನು ಕಂಪೆನಿ ಉಳಿಸಿದೆ ಎಂದು ಹೇಳಿದ್ದಾರೆ.

IBM ಮಾತ್ರವಲ್ಲದೆ ಹಲವಾರು ಈ ವರ್ಷ ಸುಮಾರು 23,000 ಉದ್ಯೋಗಿಗಳನ್ನು ಮನೆಗೆ ಕಳುಹಿಸಿದೆ. ಕೇವಲ ದೊಡ್ಡದಲ್ಲದೆ ಚಿಕ್ಕ ಚಿಕ್ಕ ಕಂಪೆನಿ ಕಂಪೆನಿಗಳು ಕೂಡ ಈ ವಿಧಾನವನ್ನು ಉಪಯೋಗಿಸುತ್ತಿರುವುದು ಕಾಣಬಹುದಾಗಿದೆ.

Comments are closed.