Puttur: ಅಡಿಕೆ ಎಲೆಚುಕ್ಕೆ ರೋಗ ನಿಯಂತ್ರಣಕ್ಕೆ ಬಳಸುವ ರೋಗ ನಾಶಕಗಳ ಖರೀದಿಗೆ ಸಹಾಯ ಧನ – ವಿವಿಧ ಕೃಷಿಗೆ ಸಹಾಯ ಧನ: ತೋಟಗಾರಿಕೆ ಇಲಾಖೆ ಮಾಹಿತಿ!

Puttur: ಅಡಿಕೆ ಬೆಳೆಗೆ ಬಾಧಿಸುವ ಎಲೆಚುಕ್ಕೆ ರೋಗ ನಿಯಂತ್ರಣಕ್ಕೆ ಬಳಸುವ ರೋಗ ನಾಶಕಗಳಾದ ಪ್ರೋಪಿಕೋನಜಾಲ್, ಟ್ಯುಬಿಕೊನಾಜಾಲ್, ಪ್ರೋಪಿನೆಬ್, ಕಾರ್ಬನ್ ಡೈಜಿಮ್ + ಮ್ಯಾಂಕೇಜೆಬ್, ಕಾಪರ್ ಸಲ್ವೇಟ್ (ಮೈಲು ತುತ್ತು) ಖರೀದಿಗೆ ಶೇಕಡಾ 30 ರಂತೆ ಪ್ರತೀ ಎಕರೆಗೆ ರೂ. 600 ಸಹಾಯಧನ ಲಭ್ಯವಿದೆ. ಪ್ರತಿ ರೈತರಿಗೆ 5 ಎಕರೆಗೆ ಗರಿಷ್ಟ 3000 ಸಹಾಯಧನ ನೀಡಲಾಗುವುದು.

ರೈತರು ಅರ್ಜಿಯೊಂದಿಗೆ
1) ಅಧಿಕೃತ ಕೀಟನಾಶಕ ಮಾರಾಟ ಪರವಾನಿಗೆ ಇರುವ ಮಾರಾಟಗಾರರಿಂದ ಮೇಲಿನ ಸಸ್ಯ ಸಂರಕ್ಷಣಾ ಔಷಧಿ ಖರೀದಿಸಿ, ಜಿ.ಎಸ್.ಟಿ. ಬಿಲ್ಲು.
2) ಪಹಣಿ ಪತ್ರ (RTC) ಆರ್.ಟಿ.ಸಿ.
3) ಜಂಟಿ ಖಾತೆ ಹೊಂದಿದ್ದಲ್ಲಿ, ಉಳಿಕೆದಾರರಿಂದ ಒಪ್ಪಿಗೆ /ಜಿ.ಪಿ.ಎ. ಪತ್ರ
4) ಆಧಾರ್
5) ಬ್ಯಾಂಕ್ ಖಾತೆ ವಿವರಗಲೊಂದಿಗೆ ದಿನಾಂಕ: 30-05-2025 ರೊಳಗೆ ತೋಟಗಾರಿಕೆ ಇಲಾಖೆಗೆ ಸಲ್ಲಿಸಲು ಕೋರಲಾಗಿದೆ.
2025-26 ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಕಾಳುಮೆಣಸು, ಜಾಯಿಕಾಯಿ, ಗೇರು, ಕೊಕ್ಕೋ, ಅಂಗಾಂಶ ಬಾಳೆ, ಡ್ರಾಗನ್ ಫೂಟ್, ರಾಂಬೂಟನ್ ಬೆಳೆಗಳಲ್ಲಿ ಹೊಸದಾಗಿ ಪ್ರದೇಶ ವಿಸ್ತರಣೆ ಹಾಗೂ ಕೃಷಿ ಹೊಂಡ ನಿರ್ಮಾಣಕ್ಕೆ ಸಹಾಯಧನ ಇರುತ್ತದೆ.
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ನೀರು ಸಂಗ್ರಹಣ ಘಟಕ, ಕ್ಷೇತ್ರ ಮಟ್ಟದಲ್ಲಿ ವಿಂಗಡಣೆ, ಪ್ಯಾಕಿಂಗ್ ಮತ್ತು ಸಂಗ್ರಹಣೆ ಘಟಕ (Farm gate) ನಿರ್ಮಾಣಕ್ಕೆ ಹಾಗೂ ಸೋಲಾರ್ ಪಂಪ್ ಸೆಟ್ ಖರೀದಿಗೆ ಸಹಾಯಧನ ಇರುತ್ತದೆ.
2025-26ನೇ ಸಾಲಿನ ಕೇಂದ್ರ ಪುರಸ್ಕೃತ ರಾಷ್ಟ್ರೀಯ ಖಾದ್ಯ ತೈಲಗಳ ಅಭಿಯಾನ ತಾಳೆ ಬೆಳೆ ಯೋಜನೆಯಡಿ ತಾಳೆ ಬೆಳೆ ಪ್ರದೇಶ ವಿಸ್ತರಣೆ ಕಾರ್ಯಕ್ರಮಕ್ಕೆ 115 ಹೆ. ತಾಲೂಕಿಗೆ ಸಹಾಯಧನದ ಇರುತ್ತದೆ. ಕನಿಷ್ಟ 2 ಹೆಕ್ಟೇರ್ ಪ್ರದೇಶದಲ್ಲಿ ತಾಳೆ ಬೇಸಾಯವನ್ನು ಕೈಗೊಂಡಿರುವ ರೈತರಿಗೆ ಡೀಸೆಲ್ ಪಂಪ್‌ಸೆಟ್ ಖರೀದಿಗೆ ಸಹಾಯಧನದ ಇರುತ್ತದೆ. ಕನಿಷ್ಟ ಒಂದು ಎಕರೆ ಇಳುವರಿ ನೀಡುತ್ತಿರುವ ತಾಳೆ ತೋಟದಲ್ಲಿ ಕೊಳವೆ ಬಾವಿ ಕೊರೆಸಲು ಸಹಾಯಧನ, ತಾಳೆ ಹಣ್ಣಗಳನ್ನು ಕಟಾವು ಮಾಡುವ ಉಪಕರಣ ಕೊಳ್ಳಲು ಸಹಾಯಧನ, ತಾಳೆ ಹಣ್ಣುಗಳ ಕಟಾವಿಗೆ ಏಣಿ ಖರೀದಿಗೆ ಸಹಾಯಧನ, ಚಾಫ್‌ಕಟ್ಟರ್ ಖರೀದಿಗೆ ಸಹಾಯಧನ ಇರುತ್ತದೆ.
2025-26 ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಜಿಲ್ಲಾ ವಲಯ ಜೇನು ಸಾಕಾಣಿಕೆ ಯೋಜನೆಯಡಿ ಜೇನುಕೃಷಿ ತರಬೇತಿ ಕಾರ್ಯಕ್ರಮಕ್ಕೆ ಹೆಸರು ನೋಂದಾಯಿಸಲು ಅರ್ಜಿ ಆಹ್ವಾನಿಸಲಾಗಿದ್ದು ಆಸಕ್ತ ರೈತರು ದಿನಾಂಕ: 30/05/2025ರೊಳಗಾಗಿ ತೋಟಗಾರಿಕೆ ಇಲಾಖೆ ಪುತ್ತೂರು ಕಚೇರಿಯಲ್ಲಿ ಹೆಸರು ನೋಂದಾಯಿಸಲು ಕೋರಿದೆ.
ಮೇಲೆ ತಿಳಿಸಿದ ಯೋಜನೆಗಳ ಕುರಿತು ಆಸಕ್ತಿಯುಳ್ಳ ರೈತರು ದಿನಾಂಕ 30-05-2025 ರೊಳಗೆ ಈ ಕೆಳಗಿನ ದಾಖಲೆಗಳೊಂದಿಗೆ ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಸಲ್ಲಿಸಬೇಕು.
1) FID ಸಂಖ್ಯೆ
2) RTC (ಪಹಣಿ ಪತ್ರ) ಆರ್.ಟಿ.ಸಿ.
3) ಜಂಟಿ ಖಾತೆ ಹೊಂದಿದ್ದಲ್ಲಿ, ಉಳಿಕೆದಾರರಿಂದ ಒಪ್ಪಿಗೆ /ಜಿ.ಪಿ.ಎ. ಪತ್ರ
4) ಆಧಾರ್ ಕಾರ್ಡ್
5) ಜಾತಿ ಪ್ರಮಾಣ ಪತ್ರ (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ರೈತರಿಗೆ)
6) ಚಾಲ್ತಿಯಲ್ಲಿರುವ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ.
ಅರ್ಜಿಯನ್ನು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಗೆ ಸಲ್ಲಿಸುವುದು ಎಂದು ಪ್ರಕಟಣೆ ತಿಳಿಸಿದೆ
Comments are closed.