KTPP Bill: ಕೆಟಿಪಿಪಿ ಮಸೂದೆಯನ್ನು 3ನೇ ಬಾರಿ ರಾಜ್ಯಪಾಲರಿಗೆ ಕಳುಹಿಸಿದ ರಾಜ್ಯ ಸರ್ಕಾರ – ಮುಂದಿನ ನಡೆ ಏನು?

KTPP Bill: ಸರ್ಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ನೀಡುವ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ತಿದ್ದುಪಡಿ) ವಿಧೇಯಕ-2025 (ಕೆಟಿಪಿಪಿ ಮಸೂದೆ) ರಾಜ್ಯ ಸರ್ಕಾರ ಮೂರನೇ ಬಾರಿಗೆ ರಾಜಭವನಕ್ಕೆ ರವಾನಿಸಿದೆ. ಸರ್ಕಾರವು ನಿರ್ದಿಷ್ಟ ವಿವರಣೆಗಳೊಂದಿಗೆ ಮೇ 22ರಂದು ಮಸೂದೆಯನ್ನು ರಾಜ್ಯಪಾಲ ಥಾವರ್‌ಚಂದ್ ಗೆಹೋಟ್ ಅವರಿಗೆ ವಾಪಸ್ ಕಳುಹಿಸಿದೆ. ಸಿಎಂ ಸಿದ್ದರಾಮಯ್ಯ ಭಾನುವಾರ ರಾಜ್ಯಪಾಲರನ್ನು ಭೇಟಿಯಾದಾಗ ಈ ವಿಷಯ ಪ್ರಸ್ತಾಪಿಸಿದ್ದಾರೆ ಎಂದು ವರದಿಯಾಗಿದೆ.
ಈ ಮೀಸಲಾತಿ ನೀಡುವುದರ ಹಿಂದಿನ ತಾರ್ಕಿಕತೆ ಹಾಗೂ ಕಾನೂನುಬದ್ಧತೆಯನ್ನು ಖುದ್ದು ಸಿಎಂಶಛ ಸಿದ್ದರಾಮಯ್ಯ ಅವರೇ ವಿವರಣೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಈ ವಿಧೇಯಕವನ್ನು ಮುಸ್ಲಿಂ ತುಷ್ಟೀಕರಣಕ್ಕಾಗಿ ಕಾಂಗ್ರೆಸ್ ತಂದಿದೆ ಎಂದು ಬಿಜೆಪಿ ಆರೋಪಿಸುತ್ತಿದೆ. 2023ರಲ್ಲಿ ರಾಷ್ಟ್ರಪತಿಗಳ ಒಪ್ಪಿಗೆಗಾಗಿ 10 ವಿಧೇಯಕಗಳನ್ನು ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಅವರು ಕಾಯ್ದಿರಿಸಿದ್ದ ನಿರ್ಧಾರವು “ಕಾನೂನುಬಾಹಿರ” ಮತ್ತು “ತಪ್ಪು” ಎಂದು ಏಪ್ರಿಲ್ 7ರಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ ಗೆಹ್ಲೋಟ್ ಅವರ ಈ ವಿಧೇಯಕದ ಬಗೆಗಿನ ಮುಂದಿನ ನಿರ್ಧಾರ ಬಹಳ ಮಹತ್ವದ್ದಾಗಿದೆ.
Comments are closed.