Death: ಹುಲಿ ದಾಳಿಗೆ ನವವಿವಾಹಿತ ಬಲಿ!

Share the Article

Death: 3 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಆದಿವಾಸಿ ಯುವಕನ ಮೇಲೆ ದಾಳಿ ನಡೆಸಿದ ಹುಲಿಯು ಆತನನ್ನು ಕೊಂದು ಹಾಕಿದ ಘಟನೆ ನಾಗರಹೊಳೆ ಉದ್ಯಾನದಂಚಿನ ಗುರುಪುರ ಗ್ರಾ.ಪಂ. ವ್ಯಾಪ್ತಿಯ ಸೊಳ್ಳೆಪುರದಲ್ಲಿ ಸಂಭವಿಸಿದೆ.

ಹುಣಸೂರು ತಾಲೂಕಿನ ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರದ 5ನೇ ಬ್ಲಾಕ್‌ನ ಕೃಷ್ಣ-ನಾಗವೇಣಿ ದಂಪತಿಯ ಪುತ್ರ ಹರೀಶ್‌ (29) ಮೃತಪಟ್ಟವರು.

ಹರೀಶ್‌ ತಂದೆಯೊಂದಿಗೆ ಬೆಳಗ್ಗೆ ಜಮೀನು ಬಳಿಯ ಅರಣ್ಯ ಪ್ರದೇಶದಲ್ಲಿ ಮೇಕೆ ಮೇಯಿಸಲು ತೆರಳಿದ್ದಾನೆ. ತಂದೆ ಕೃಷ್ಣ ಅರಣ್ಯದ ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ಮೇಕೆ ಮೇಯಿಸುತ್ತಿದ್ದ ಹರೀಶ್‌ ಮೇಲೆ ಒಮ್ಮೆಲೆ ಹುಲಿ ದಾಳಿ ನಡೆಸಿದೆ.

ಹರೀಶ್‌ ಕಿರುಚಿದಾಗ ತಂದೆ ಕೃಷ್ಣ ಧಾವಿಸಿ ಬಂದು ಹುಲಿಯ ಬೆದರಿಸಿ ಓಡಿಸಿದ್ದಾರೆ. ಆದರೆ ಗಂಭೀರ ಗಾಯಗೊಂಡಿದ್ದ ಹರೀಶ್‌ ಸಾಕಷ್ಟು ರಕ್ತ ಸ್ರಾವದಿಂದ ಅಸ್ವಸ್ಥಗೊಂಡಿದ್ದ ಆತನ ಹುಣಸೂರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲೇ ಕೊನೆಯುಸಿರೆಳೆದಿರುವುದಾಗಿ ತಿಳಿದುಬಂದಿದೆ.

Comments are closed.