Putturu: 500 ರೂ ಗಡಿ ದಾಟಿದ ಹೊಸ ಅಡಿಕೆ ರೇಟ್

Putturu: ಮಳೆ ಅತಿಯಾದುದರಿಂದ ಅಡಿಕೆ ಬೆಳೆಗಳಿಗೆ ಹಾನಿಯಾಗುತ್ತದೆಂಬ ಚಿಂತೆಯಲ್ಲಿ ರೈತರಿದ್ದರೆ, ರೈತರಿಗೊಂದು ಸಿಹಿ ಸುದ್ದಿ ಸಿಕ್ಕಿದೆ. ಹೊರ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಧಾರಣೆ ಬೆಲೆ ಕೆಜಿ ಗೆ 500 ರೂ ದಾಟಿ ಮುಂದೆ ಸಾಗಿದೆ. ಹೊಸ, ಸಿಂಗಲ್ ಚೋಲ್, ಡಬಲ್ ಚೋಲ್ ಎಂಬ 3 ವಿಧದ ಅಡಿಕೆಗಳು 500 ದಾಟಿ ದಾಖಲೆ ಬರೆದಿದ್ದು, ಹೊಸ ಧಾರಣೆ ಅಡಿಕೆ 500 ದಾಟುತ್ತದೆ ಎಂಬ ನಿರೀಕ್ಷೆ ಮಾರುಕಟ್ಟೆಯಲ್ಲಿತ್ತು.

ಮೇ 26 ರಂದು ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಕೆಜಿ 495ರೂ, ಸಿಂಗಲ್ ಚೋಲ್ 525, ಡಬಲ್ ಚೋಲ್ 520 ದಾಖಲಾಗಿದ್ದು, ಹೊರ ಮಾರುಕಟ್ಟೆಯಲ್ಲಿ ಹೊಸ ಅಡಿಕೆ 505, ಸಿಂಗಲ್ 525 ಹಾಗೂ ಡಬಲ್ ಚೋಲ್ 525 ರೂ ಗಳನ್ನು ಕಂಡುಕೊಂಡಿದೆ. ಹಾಗೂ ಹಳೆ ಪಟೋರಾ ಧಾರಣೆ ಕೆಜಿ ಗೆ 380 ರೂ ಇದ್ದು, 400 ಗಡಿ ಸಾಧ್ಯತೆ ಇದೆ.
ಕೆಲವು ದಿನಗಳಿಂದ ಹೊಸ ಅಡಿಕೆ ಗೆ ಬಾರಿ ಬೇಡಿಕೆ ಇದ್ದು, ಮಾರುಕಟ್ಟೆಗೆ ಅದು ಪೂರೈಕೆಯಾಗದೆ ಬಾರಿ ಸಮಸ್ಯೆಯಾಗಿತ್ತು. ಹೀಗಾಗಿ ಹೊಸ ಅಡಿಕೆ ಬೆಲೆ ಏರಿಸುವ ಮೂಲಕ ಅವು ಮಾರುಕಟ್ಟೆಗೆ ಬರುವ ಹಾಗಾಗಿದೆ. ಇನ್ನೂ ಹಳೆ ಅಡಿಕೆಯು ಹೊಸದಕ್ಕೆ ಪೈಪೋಟಿ ನೀಡುತ್ತಿರುವುದು ಕಾಣಬಹುದಾಗಿದೆ.
Comments are closed.