Mangaluru: ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದಲ್ಲಿ ಅಂತರಾಷ್ಟ್ರೀಯ ಸಮ್ಮೇಳನ ಮತ್ತು ಮ್ಯಾಗ್ನಮ್ ಪೆಸ್ಟ್

Mangaluru: ಮಂಗಳೂರು (Mangaluru) ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿಯ ವಾಣಿಜ್ಯ ವಿಭಾಗವು ದಿನಾಂಕ 29 ಮತ್ತು 30 ರಂದು ವಾಣಿಜ್ಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ – ಚಾಲಿತ ಜಾಗತಿಕ ವಿದ್ಯಮಾನಗಳು ಎಂಬ ವಿಷಯದ ಕುರಿತು ಬ್ಯಾಂಕ್ ಆಪ್ ಬರೋಡ ಚೇರ್, ಕೆನರಾ ಬ್ಯಾಂಕ್ ಚೇರ್ ಮತ್ತು ಯೂನಿಯನ್ ಬ್ಯಾಂಕ್ ಚೇರ್ ಸಂಯೋಜನೆಯೊಂದಿಗೆ ಎರಡು ದಿನಗಳ ಅಂತರಾಷ್ಟ್ರೀಯ ಸಮ್ಮೇಳನ ನಡೆಸಲಿದೆ.

ಮ್ಯಾಗ್ನಮ್ ಪೆಸ್ಟ್
ವಾಣಿಜ್ಯ ವಿಭಾಗವು ಪ್ರತಿ ವರುಷವು ಆಯೋಜಿಸುತ್ತಿರುವ ಮ್ಯಾಗ್ನಮ್ – 2025 ರಾಷ್ಟ್ರಮಟ್ಟದ ಮ್ಯಾನೇಜ್ಮೆಂಟ್ ಮತ್ತು ಕಲ್ಚರಲ್ ಪೆಸ್ಟ್ ʼಯುಗಾಂತರʼ ಎಂಬ ಹೆಸರಿನಲ್ಲಿ ಎರಡು ದಿನ ನಡೆಯಲಿದೆ. ಮ್ಯಾಗ್ನಮ್ ಪೆಸ್ಟ್ ನಲ್ಲಿ ಮುಖ್ಯವಾಗಿ ಪೈನಾನ್ಸ್, ಬ್ಯುಸಿನೆಸ್ ಕ್ವಿಜ್, ಇವೆಂಟ್ ಮ್ಯಾನೇಜ್ಮೆಂಟ್, ಮಾರ್ಕೆಟಿಂಗ್, ಪಬ್ಲಿಕ್ ರಿಲೇಷನ್ ಮತ್ತು ಬೆಸ್ಟ್ ಎಂಟ್ರಿಪ್ರಿನ್ಯುಯರ್ ಅಂತರ್ ಕಾಲೇಜು ಇವೆಂಟ್ಗಳು ನಡೆಯಲಿವೆ. ಮ್ಯಾಗ್ನಮ್ ಪೆಸ್ಟ್ ನಲ್ಲಿ ಸ್ಪರ್ದಿಸಲು ಅನೇಕ ಕಾಲೇಜಗಳಿಂದ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
Comments are closed.