Karnataka Gvt: ಇನ್ಮುಂದೆ ‘ಸಬ್ ರಿಜಿಸ್ಟ್ರಾರ್’ ಕಚೇರಿಗಳಿಗೆ ಮಂಗಳವಾರ ರಜೆ!!

Share the Article

Karnataka Gvt: ಇನ್ನು ಮುಂದೆ ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ ಪ್ರತೀ ಮಂಗಳವಾರ ರಜೆಯನ್ನು ಘೋಷಿಸಿ ರಾಜ್ಯ ಸರ್ಕಾರವು ಮಹತ್ವದ ಆದೇಶವನ್ನು ಹೊರಡಿಸಿದೆ.

ಹೌದು, ರಾಜ್ಯದ ಪ್ರತಿಯೊಂದು ಜಿಲ್ಲಾ ನೋಂದಣಿ ಕಚೇರಿ ವ್ಯಾಪ್ತಿಯಲ್ಲಿನ ಉಪ ನೋಂದಣಾಧಿಕಾರಿ ಕಚೇರಿಗಳು ಸರದಿಯಂತೆ 2ನೇ ಮತ್ತು 4ನೇ ಶನಿವಾರ ಹಾಗೂ ಭಾನುವಾರದ ರಜಾ ದಿನಗಳಂದು ಕಾರ್ಯನಿರ್ವಹಿಸಬೇಕು. ಯಾವ ಕಚೇರಿ ಆಯಾ ವಾರದ ರಜಾ ದಿನದಂದು ತೆರೆದಿರುತ್ತದೆಯೋ ಆ ಕಚೇರಿಗೆ ಮುಂದಿನ ಮಂಗಳವಾರ ರಜೆ ಇರುತ್ತದೆ ಎಂದು ಕಂದಾಯ ಇಲಾಖೆ ಹೊರಡಿಸಿದ ಆದೇಶದಲ್ಲಿ ವಿವರಿಸಲಾಗಿದೆ.

ಈ ಕುರಿತು ಉಲ್ಲೇಖಿತ ಪತ್ರದಲ್ಲಿನ ಅಧಿಸೂಚನೆಯಲ್ಲಿ ಸೂಚಿಸಿರುವಂತೆ ರಾಜ್ಯದ ಎಲ್ಲಾ ಉಪನೋಂದಣಿ ಕಛೇರಿಗಳು ದಿನಾಂಕ:01-06-2025 ರಿಂದ 28-12-2025 ರ ವರೆಗೆ ಬರುವ 2ನೇ ಶನಿವಾರ, 4ನೇ ಶನಿವಾರ ಮತ್ತು ಭಾನುವಾರಗಳ ರಜಾದಿನಗಳಂದು ಅನುಬಂಧದಲ್ಲಿ ದಿನಾಂಕಗಳನ್ನು ನಿಗಧಿಪಡಿಸಲಾಗಿದೆ. ಅದರಂತೆ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದೆ ಹಾಗೂ ನಿಗಧಿಪಡಿಸಿದ ದಿನಾಂಕಗಳಂದು ಕರ್ತವ್ಯ ನಿರ್ವಹಿಸಿದ ಉಪನೋಂದಣಾಧಿಕಾರಿಗಳು ಕಛೇರಿಗೆ ಕಾರ್ಯನಿರ್ವಹಿಸಿದ ರಜಾ ದಿನದಲ್ಲಿ ತಕ್ಷಣ ಬರುವ ಮುಂದಿನ ಮಂಗಳವಾರ ದಿನವನ್ನು ರಜಾ ದಿನವೆಂದು ಘೋಷಿಸಿದೆ.

Comments are closed.