Viral Video : ವಿಮಾನದೊಳಗೆ ಫ್ರೆಂಚ್ ಅಧ್ಯಕ್ಷರ ಮುಖಕ್ಕೆ ಪತ್ನಿಯಿಂದಲೇ ‘ಪಂಚ್’ – ವಿಡಿಯೋ ವೈರಲ್

Viral Video : ಎಷ್ಟೇ ದೊಡ್ಡ ವ್ಯಕ್ತಿಯೇ ಆಗಿರಲಿ..ಒಂದು ದೇಶದ ಅಧ್ಯಕ್ಷ-ಪ್ರಧಾನಿಯೇ ಆಗಿರಲಿ. ಮಹಾರಾಜನೇ ಆಗಿರಲಿ..ಅವನು ತನ್ನ ಹೆಂಡತಿ ಎದುರು ತಲೆಬಾಗಲೇಬೇಕು. ಗಂಡನ ಮೂಗುದಾರ ಹೆಂಡತಿ ಕೈಯಲ್ಲಿರುತ್ತದೆ ಎಂಬುದು ಜನಜನಿತವಾದ ಮಾತು. ಇದು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ವಿಷಯದಲ್ಲಿ ಸತ್ಯವೇ ಇದ್ದಂತೆ ಇದೆ. ಯಾಕೆಂದ್ರೆ ಎಮ್ಯಾನುಯೆಲ್ ಮ್ಯಾಕ್ರನ್ ಕೆನ್ನೆಗೆ ಅವರ ಪತ್ನಿ ಜೋರಾಗಿ ಹೊಡೆದ ವಿಡಿಯೊವೊಂದು ಭಾರಿ ವೈರಲ್ ಆಗುತ್ತಿದೆ.

❗️ Macron’s wife viciously SMACKS him in face pic.twitter.com/2zSalRFYLu
— RT (@RT_com) May 26, 2025
ಹೌದು, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ವಿಯೆಟ್ನಾಂನಿಂದ ಭಾನುವಾರ ಸಂಜೆ ತಮ್ಮ ಆಗ್ನೇಯ ಏಷ್ಯಾ ಪ್ರವಾಸವನ್ನು ಪ್ರಾರಂಭಿಸಲು ಹನೋಯ್‌ಗೆ ಬಂದಿಳಿದಿದ್ದರು. ಈ ವೇಳೆ ಅವರ ಪತ್ನಿ ಬ್ರಿಗಿಟ್ ಮ್ಯಾಕ್ರನ್ ವಿಮಾನದಿಂದ ಇಳಿದ ತಕ್ಷಣ ಅವರ ಮುಖಕ್ಕೆ ಕಪಾಳಮೋಕ್ಷ ಮಾಡುತ್ತಿರುವುದು ಕಂಡುಬರುತ್ತದೆ. ಆರಂಭದಲ್ಲಿ ಸ್ವಲ್ಪ ಗಾಬರಿಯಾದ ಎಮ್ಯಾನುಯೆಲ್ ಅವರು ತಕ್ಷಣವೇ ಸಾವರಿಸಿಕೊಂಡು, ತಮ್ಮನ್ನ ಸ್ವಾಗತಿಸಲು ಏರ್‌ಪೋರ್ಟ್‌ಗೆ ಬಂದು ನಿಂತವರತ್ತ ಕೈ ಬೀಸಿದ್ದಾರೆ. ಇದಾದ ಬಳಿಕ ಮ್ಯಾಕ್ರನ್ ಏನೂ ನಡೆದಿಲ್ಲ ಎಂಬಂತೆ ತಮ್ಮ ಕೈ ಹಿಡಿದುಕೊಳ್ಳುವಂತೆ ಬ್ರಿಗಿಟ್‌ಗೆ ಸನ್ನೆ ಮಾಡುತ್ತಾರೆ. ಆದರೆ ಅದನ್ನು ಲೆಕ್ಕಿಸದ ಬ್ರಿಗಿಟ್ ಪ್ರತ್ಯೇಕವಾಗಿಯೇ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುತ್ತಾರೆ.
ಅಂದಹಾಗೆ ಎಮ್ಯಾನುಯೆಲ್ ಮುಖಕ್ಕೆ ಹೊಡೆದ ವಿಡಿಯೊದಲ್ಲಿ ಅವರ ಪತ್ನಿ ಬ್ರಿಗಿಟ್ಟೆ ಮ್ಯಾಕ್ರನ್ ಕಾಣಿಸುವುದಿಲ್ಲ. ಆದರೆ ವಿಡಿಯೊದಲ್ಲಿ ಕಾಣಿಸುವ ಕೈಗಳು ಕೆಂಪು ಬಣ್ಣದ ತೋಳಿನ ಡ್ರೆಸ್‌ನ್ನ ತೋರಿಸುತ್ತವೆ. ನಂತರ ಎಮ್ಯಾನುಯೆಲ್ ಮತ್ತು ಬ್ರಿಗಿಟ್ಟಿ ಒಟ್ಟಿಗೇ ಬಂದಾಗ ಬ್ರಿಗಿಟ್ಟಿ ಅವರು ಕೆಂಪು ಬಣ್ಣದ ಕೋಟ್ ತೊಟ್ಟಿದ್ದನ್ನ ನೋಡಬಹುದು. ಹೀಗಾಗಿ ಪ್ಲೇನ್ ಒಳಗೆ ಎಮ್ಯಾನುಯೆಲ್ ಮುಖವನ್ನ ಕೈಗಳಿಂದ ಜೋರಾಗಿ ತಳ್ಳಿದ್ದು ಬ್ರಿಗಿಟ್ಟಿ ಅವರೇ ಎಂಬುದು ಖಚಿತವಾಗುತ್ತದೆ.
ಇನ್ನು ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಎಷ್ಟು ವೈರಲ್ ಆಗಿದೆಯೆಂದರೆ ಇದಕ್ಕೆ ಫ್ರೆಂಚ್ ಅಧ್ಯಕ್ಷರೇ ಸ್ಪಷ್ಟೀಕರಣ ನೀಡಿದ್ದಾರೆ. ನಾವು ಮೋಜಿನಿಂದ ಕೆಳಗೆ ಇಳಿಯುತ್ತಿದ್ದೆವು. ಅದನ್ನು ತಪ್ಪಾಗಿ ಬಿಂಬಿಸಲಾಗಿದೆ. ನಾವು ತಮಾಷೆಯಿಂದ ವರ್ತಿಸುತ್ತಿದ್ದಾಗ ಈ ರೀತಿ ಆಗಿದೆ. ಅದನ್ನು ಹೊರಗಿನಿಂದ ನೋಡಿದವರು ಆಶ್ಚರ್ಯಕ್ಕೀಡಾಗಿದ್ದಾರೆ. ಜನರ ಪ್ರತಿಕ್ರಿಯೆ ನೀಡಿ ನಮಗೂ ಅಚ್ಚರಿಯಾಗಿದೆ. ಜನರು ಮನಸಿಗೆ ಬಂದಂತೆ ಊಹೆ ಮಾಡಿಕೊಳ್ಳುತ್ತಿದ್ದಾರೆ. ಅವರೆಲ್ಲರೂ ಶಾಂತ ರೀತಿಯಿಂದ ವರ್ತಿಸಬೇಕು! ಎಂದು ಮ್ಯಾಕ್ರನ್ ಹೇಳಿದ್ದಾರೆ
Comments are closed.