Covid 19: ಶಿವಮೊಗ್ಗದಲ್ಲಿ ಮೊದಲ ಕೊರೊನಾ ಕೇಸ್ ದಾಖಲೆ

Shivamogga: ರಾಜ್ಯದಲ್ಲಿ ಕೊರೊನಾ ಕೇಸುಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದೀಗ ಶಿವಮೊಗ್ಗದಲ್ಲಿ ಮೊದಲ ಕೇಸು ದಾಖಲಾಗಿದೆ.
ಹಾವೇರಿ ಜಿಲ್ಲೆಯ ವೃದ್ಧ ಒಬ್ಬರು ಮೇ 19 ರಂದು ಹೃದಯ ಸಂಬಂಧಿ ಖಾಯಿಲೆ ಯಿಂದಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದು, ಅವರಿಗೆ ಕಫ ಇರುವ ಕಾರಣ ಕೋವಿಡ್ ಟೆಸ್ಟ್ ಮಾಡಿಸಿದಾಗ ಪಾಸಿಟಿವ್ ಬಂದಿರುತ್ತದೆ.
ಹೃದಯ ಸಂಬಂಧಿ ಖಾಯಿಲೆಗೆ ಚಿಕಿತ್ಸೆ ಪಡೆದು ಸೋಮವಾರ ಡಿಸ್ಚಾರ್ಜ್ ಆಗಿದ್ದು, ಮನೆಗೆ ತೆರಳಿದ ಬಳಿಕ ಕೊರೊನಾ ಪಾಸಿಟಿವ್ ವಿಚಾರ ತಿಳಿದು ಗಾಬರಿಗೊಳಗಾಗಿದ್ದಾರೆ.
ದಿನೇ ದಿನೇ ಕೋವಿಡ್ ಹೆಚ್ಚಾಗಿದ್ದು ಮೇ 26 ಅಂದರೆ ನಿನ್ನೆ ಸುಮಾರು 37 ಕೇಸ್ ಗಳು ದಾಖಲಾಗಿದ್ದು ಒಟ್ಟು ರಾಜ್ಯದಲ್ಲಿ 80 ಕೇಸ್ ಗಕು ದಾಖಲಾಗಿವೆ. ಹಾಗೂ ಕೇವಲ ಬೆಂಗಳೂರಿನಲ್ಲಿ 73 ಕೇಸುಗಳಿವೆ.
Comments are closed.