Bantwala: ಬಂಟ್ವಾಳ: ವಿದ್ಯುತ್‌ ಕಂಬಕ್ಕೆ ಕಾರು ಡಿಕ್ಕಿ: ಚಾಲಕ ಸಾವು

Share the Article

Bantwala: ಭಾರೀ ಮಳೆಯ ಕಾರಣ ಕಾರೊಂದು ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಗುದ್ದಿ ಚಾಲಕ ಮೃತಪಟ್ಟ ಘಟನೆ ಬಿಸಿ ರೋಡ್‌ ಬಳಿ ನಡೆದಿದೆ.

ಮಂಚಿ ಭಂಡಾರಕೊಟ್ಟಿಗೆ ನಿವಾಸಿ ತುಂಬೆಯ ಖಾಸಗಿ ಆಸ್ಪತ್ರೆಯ ಕ್ಯಾಂಟೀನ್‌ ಸಿಬ್ಬಂದಿ ಜಯಂತ್‌ ಗೌಡ ಮೃತ ವ್ಯಕ್ತಿ ಎಂದು ವರದಿಯಾಗಿದೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಹಾಗೂ ವಿದ್ಯುತ್‌ ಕಂಬಕ್ಕೂ ಹಾನಿಯಾಗಿದೆ. ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡುತ್ತಿದ್ದಾರೆ.

Comments are closed.