Crime: ತಲೆಕಾಯಿ ತೆಗೆದು ಬಿಟ್ಟೆ ಸಾ‌ರ್ ಎಂದು ಮಹಿಳೆಯನ್ನು ಕೊಂದು ಮಚ್ಚು ಸಮೇತ ಠಾಣೆಯಲ್ಲಿ ಶರಣಾದ ಯುವಕ!

Share the Article

Crime: ಯುವಕನೊಬ್ಬ ಮಹಿಳೆಯನ್ನು ಬರ್ಬರವಾಗಿ ಮಚ್ಚಿನಿಂದ ಕೊಚ್ಚಿ ಕೊಂದು (Crime) , ಮಾರಕ ಆಯುಧ ಸಹಿತ ಠಾಣೆಗೆ ಬಂದು ಹಾಜರಾಗಿರುವ ಘಟನೆ ತೆಲಂಗಾಣದ ರಾಜಣ್ಣ ಸಿರ್ಸಿಲಾದಲ್ಲಿ ಸೋಮವಾರ ನಡೆದಿದೆ.

ಈತ ಠಾಣೆಗೆ ಬಂದಾಗ ಪೊಲೀಸರು ಸಾಯಿಸಿಬಿಟ್ಟೆಯಾ ಎಂದು ಪ್ರಶ್ನಿಸಿದ್ದಕ್ಕೆ ತಲೆಕಾಯಿ ತೀಸೇಸಾನು (ತಲೆಬುರುಡೆ ಒಡೆದು ಹಾಕಿದ್ದೇನೆ) ಎಂದು ಉತ್ತರಿಸಿದ್ದಾನೆ. ಈ ವಿಡಿಯೋ ಈಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ.

ಮೃತ ಮಹಿಳೆಯ ಹೆಸರು ದರ್ಜಗಾ ಎಂದು ತಿಳಿದುಬಂದಿದೆ. ಈತ ಆಕೆಯನ್ನು ಕೊಂದ ಕೊಂದ ಕಾರಣ ಇನ್ನೂ ಹೊರಬಿದ್ದಿಲ್ಲ. ಈತನ ಗಣೇಶನ ಹಬ್ಬದ ದಿನ ಮತ್ತೊಂದು ವ್ಯಕ್ತಿಯನ್ನು ಕೊಲೆಗೈದು ಜೈಲು ಸೇರಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.