Diamond: ಆಂಧ್ರಪ್ರದೇಶದ ರೈತನಿಗೆ ಜಮೀನಿನಲ್ಲಿ ₹30 ಲಕ್ಷ ಮೌಲ್ಯದ ವಜ್ರ ಪತ್ತೆ

Diamond: ಆಂಧ್ರಪ್ರದೇಶದ(AP) ಕರ್ನೂಲು ಜಿಲ್ಲೆಯ ರೈತರೊಬ್ಬರಿಗೆ(Farmer) ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ₹30 ಲಕ್ಷ ಮೌಲ್ಯದ ವಜ್ರ ದೊರೆತಿದೆ. ಅದೇ ಹಳ್ಳಿಯ ವ್ಯಾಪಾರಿಯೊಬ್ಬರು ಜಮೀನಿಗೆ ಹೋಗಿ ಅದನ್ನು ಖರೀದಿಸಿದರು. ಪೆರವಲಿಯ ಮತ್ತೊಬ್ಬ ರೈತನೊಬ್ಬನಿಗೆ ಸಹ ವಜ್ರ ಸಿಕ್ಕಿದ್ದು, ಇದನ್ನು ವ್ಯಾಪಾರಿಯೊಬ್ಬರು ₹1.5 ಲಕ್ಷಕ್ಕೆ ಖರೀದಿ ಮಾಡಿದ್ದಾರೆ. ಮುಂಗಾರು ಆರಂಭದಲ್ಲಿ ಕರ್ನೂಲಿನ ಹಲವು ಭಾಗಗಳಲ್ಲಿ ವಜ್ರಗಳು ಕಂಡುಬರುತ್ತವೆ.

ಮಳೆಯ ನಂತರ ರೈತ ಕೃಷಿ ಕೆಲಸದಲ್ಲಿ ತೊಡಗಿರುವಾಗ ಆಕಸ್ಮಿಕವಾಗಿ ವಜ್ರ ಪತ್ತೆಯಾಗಿದೆ. ಅತ್ತ ವಜ್ರ ಪತ್ತೆಯಾದ ಸುದ್ದಿ ಹರಡುತ್ತಿದ್ದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಹತ್ತಿರದ ಹೊಲಗಳಿಗೆ ಹೋಗಿ ವಜ್ರಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಇದೇ ವೇಳೆ ಕರ್ನೂಲ್ ಜಿಲ್ಲೆಯ ಮಡ್ಡಿಕೇರಾ ಮಂಡಲದಲ್ಲಿ ವ್ಯಕ್ತಿಯೊಬ್ಬರಿಗೆ ದೊಡ್ಡ ಗಾತ್ರದ ವಜ್ರವೊಂದು ಸಿಕ್ಕಿದೆ. ಇದರ ಮೌಲ್ಯ ಬರೋಬ್ಬರಿ 90 ಲಕ್ಷ ರೂ. ಎಂದು ತಿಳಿದುಬಂದಿದೆ. ಆದರೆ, ಪೆರಾವಲಿಯ ಉದ್ಯಮಿಯೊಬ್ಬರು ಈ ವಜ್ರವನ್ನು 30 ಲಕ್ಷ ರೂಪಾಯಿ ಹಾಗೂ 10 ತೊಲ ಚಿನ್ನಕ್ಕೆ ಖರೀದಿಸಿದ್ದಾರೆ ಎಂದು ಮಾಹಿತಿಯಿದೆ. ಆದರೆ ಮಾರುಕಟ್ಟೆಯಲ್ಲಿ ಈ ವಜ್ರದ ಮೌಲ್ಯ ಮೂರು ಪಟ್ಟು ಹೆಚ್ಚಿದೆ ಎಂಬ ಚರ್ಚೆ ನಡೆಯುತ್ತಿದೆ.
Comments are closed.