Bengaluru: 21 ದಿನ ರಸ್ತೆಯಲ್ಲೇ ವಾಹನ ನಿಂತರೆ ವಾಹನ ಹರಾಜು: ಟ್ರಾಫಿಕ್ ಕಂಟ್ರೋಲ್ ಗೆ ಹೊಸ ನಿಯಮ

Bengaluru: ಬಾರಿ ಟ್ರಾಫಿಕ್ ಕರ್ನಾಟಕದಲ್ಲಿಯೇ ಹೆಸರುವಾಸಿ ಬೆಂಗಳೂರು, ಮಳೆ ಬಂದರಂತೂ ಕೇಳುವುದೇ ಬೇಡ. ನಗರದಲ್ಲಿ ನಿರಂತರ ಟ್ರಾಫಿಕ್ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರ ಮುಂದಾಗಿದ್ದು, ರಸ್ತೆ ಬದಿಯಲ್ಲಿ ಹೆಚ್ಚು ಕಾಲ ನಿಲ್ಲಿಸಿರುವ ವಾಹನಗಳ ಮೇಲೆ ಕ್ರಮ ಕೈಗೊಳ್ಳಲು ಪಾಲಿಕೆ ಮುಂದಾಗಿದೆ.

ಈ ಕುರಿತಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ ರಸ್ತೆ ಬದಿ ವಾಹನಗಳನ್ನು ನಿಲ್ಲಿಸುವುದರಿಂದ ಬಹಳ ಸಮಸ್ಯೆ ಎದುರಾಗುತ್ತಿದ್ದು, 21 ದಿನಗಳಿಗೂ ಹೆಚ್ಚು ನಿಲ್ಲಿಸುವ ವಾಹನಗಳನ್ನು ಇನ್ನು ಮುಂದೆ ಪಾಲಿಕೆ ವಶಕ್ಕೆ ಪಡೆಯುತ್ತದೆ ಎಂದು ತಿಳಿಸಿದ್ದಾರೆ.
ಈ ರೀತಿ ನಿಲ್ಲಿಸುವ ವಾಹನಗಳನ್ನು ಅನಾಥ ವಾಹನ ಎಂದು ಪರಿಗಣಿಸಿ ಪಾಲಿಕೆ ಅವುಗಳನ್ನು ಹರಾಜಿನಲ್ಲಿ ಮಾರಾಟ ಮಾಡುತ್ತದೆ ಎಂದು ಡಿಕೆಶಿ ತಿಳಿಸಿದ್ದು, ಇದರಿಂದಾದರೂ ಬೆಂಗಳೂರಿನ ಟ್ರಾಫಿಕ್ ಕಡಿಮೆಯಾಗುವ ನಿರೀಕ್ಷೆಯಲ್ಲಿ ಸರ್ಕಾರವಿದೆ.
Comments are closed.