Trump: ಉಕ್ರೇನ್ ವಿರುದ್ಧ ಮತ್ತೆ ರಷ್ಯಾ ಡ್ರೋನ್ ದಾಳಿ: ಪುಟಿನ್ ರನ್ನು ಹುಚ್ಚ ಎಂದ ಟ್ರಂಪ್

Share the Article

Washington: ಭಾನುವಾರ ಉಕ್ರೇನ್ ವಿರುದ್ಧ ರಷ್ಯಾ ಮಾರಂತಿಕ ಡ್ರೋನ್ ದಾಳಿ ನಡೆಸಿದ್ದು, ಈ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆರಳಿದ್ದಾರೆ. ಈ ಡ್ರೋನ್ ದಾಳಿಯಿಂದಾಗಿ ಹಲವಾರು ಪ್ರಾಣ ತೆತ್ತಿದ್ದು, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ರನ್ನು ಟ್ರಂಪ್ ‘Crazy’ (ಹುಚ್ಚ) ಎಂದು ಹೇಳಿದ್ದಾರೆ.

ಈ ಡ್ರೋನ್ ದಾಳಿಯಿಂದಾಗಿ ಸುಮಾರು 13 ಜನ ಸಾವನ್ನಪ್ಪಿದ್ದು, ಈ ಕುರಿತಾಗಿ ಪುಟಿನ್ ವಿರುದ್ಧ ಟೀಕೆಗಳನ್ನು ಅಮೆರಿಕ ಅಧ್ಯಕ್ಷ ತಮ್ಮ X ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಪುಟಿನ್ ವಿರುದ್ಧ ಆಗಾಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದ ಟ್ರಂಪ್ ಈಗ ತೀವ್ರ ಆಕ್ರೋಶ ಹೊರಹಾಕಿದ್ದು, ಉಕ್ರೇನ್ ಜೊತೆಗಿನ ಕದನ ವಿರಾಮ ಮಾತುಕತೆಗಳಲ್ಲಿ ರಷ್ಯಾದ ಬಗ್ಗೆ ಹೆಚ್ಚುತ್ತಿರುವ ಹತಾಶೆಯನ್ನು ವ್ಯಕ್ತಪಡಿಸಿರುತ್ತಾರೆ.

ಇದಕ್ಕೂ ಮುನ್ನಾ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಉಕ್ರೇನ್ ಮೇಲಿನ ದಾಳಿಯಿಂದ ಬೇಸರವಾಗಿದೆ. ರಷ್ಯಾ ವಿರುದ್ಧ ನಿರ್ಬಂಧಗಳನ್ನು ಹೆಚ್ಚಿಸುವ ಬಗ್ಗೆ ಸಂಪೂರ್ಣವಾಗಿ ಪರಿಗಣಿಸುತ್ತಿರುವುದಾಗಿ ತಿಳಿಸಿದ್ದು, ಈ ರೀತಿಯಾಗಿ ಜನರನ್ನು ಕೊಳ್ಳುವುದು ಸರಿಯಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

Comments are closed.