Rajguru Dwarakanath Predictions: ಯುದ್ಧ ಬಿಕ್ಕಟ್ಟು, ಪ್ರಕೃತಿಯಲ್ಲಿ ವಿಷಗಾಳಿ: ಸ್ಫೋಟಕ ಭವಿಷ್ಯ ನುಡಿದ ರಾಜಗುರು ದ್ವಾರಕನಾಥ್

Bengaluru: ಖ್ಯಾತ ಜ್ಯೋತಿಷಿಗಳಾದಂತಹ ರಾಜಗುರು ದ್ವಾರಕನಾಥ್ ಭಾರತದ ಮುಂದಿನ ದಿನಗಳ ಕುರಿತಾಗಿ ಭವಿಷ್ಯ ನುಡಿದಿದ್ದು, ಗ್ರಹಗಳ ಸ್ಥಾನ ಪಲ್ಲಟದಿಂದ ಯುಗಾದಿಯವರೆಗೆ ಭಾರತದಲ್ಲಿ ಸಮಸ್ಯೆಗಳು ಹೆಚ್ಚಾಗುತ್ತವೆ ಎಂದು ತಿಳಿಸಿದ್ದಾರೆ. ಹಾಗಾಗಿ ಆಡಳಿತ ಪಕ್ಷಗಳು, ಪ್ರತಿಪಕ್ಷಗಳು ಎಚ್ಚರ ವಹಿಸಬೇಕು ಸಲಹೆ ನೀಡಿದ್ದಾರೆ.
ಎರಡು ಸೂರ್ಯಗ್ರಹಣ ಮತ್ತು ಎರಡು ಚಂದ್ರಗ್ರಹಗಳು ಸಂಭವಿಸಲಿದ್ದು, ಎಚ್ಚರ ವಹಿಸಬೇಕು ಹಾಗೂ 2025ರ ಜೂನ್ 22ರ ನಂತರ ಪ್ರಪಂಚದ ಕೆಲವು ದೇಶಗಳಿಗೆ ಭಾರಿ ಕಂಟಕವಿದೆ. ಪ್ರತಿ ಬಾರಿಯೂ ಗ್ರಹಗಳ ಸ್ಥಾನ ಬದಲಾದರೂ, ಈ ಬಾರಿಯ ಚಲನೆ ವಿಶಿಷ್ಟವಾಗಿರುವುದರಿಂದ ಸಾಕಷ್ಟು ಬದಲಾವಣೆಗಳು ಸಂಭವಿಸಲಿವೆ ಎಂದಿದ್ದಾರೆ.
ಪ್ರಾಕೃತಿಕ ವಿಕೋಪಗಳು ಎದುರಾಗಲಿದ್ದು, ವಿಷ ಗಾಳಿ ಬೀಸುವುದರ ಬೆಳೆಗಳಿಗೆ ಹಾನಿಯುಂಟಾಗಲಿದೆ. ಹಾಗೂ ರಷ್ಯಾ ಮಾತ್ರವೇ ಭಾರತದ ಪರವಾಗಿದ್ದು, ಭಾರತವೊಂದೇ ಏಕಾಂಗಿಯಾಗಿ ಪಾಕ್ ಅನ್ನು ಗೆಲ್ಲಬಹುದು ಎಂದಿದ್ದಾರೆ. ಗ್ರಹಗಳ ಚಲನೆಗಳ ಬಗೆಗೆ ಹೇಳಿದ ಅವರು ಹಿಂದುಳಿದ ವರ್ಗ, ಅಲ್ಪಸಂಖ್ಯಾತರನ್ನು ಓಲೈಸುವ ನೆಪದಲ್ಲಿ ಬಿಜೆಪಿಯೂ ದೇವರು ಧರ್ಮವನ್ನು ಮರೆತರೆ ಬಿಜೆಪಿಗೆ ವೈಫಲ್ಯ ಕಟ್ಟಿಟ್ಟ ಬುತ್ತಿ ಎಂದಿದ್ದಾರೆ. ಒನ್ ನೇಷನ್ ಒನ್ ಎಲೆಕ್ಷನ್ ದೇಶಕ್ಕೆ ಉತ್ತಮ ಎಂದಿರುವ ಗುರೂಜಿ ಬಿಹಾರದಲ್ಲಿ ನಡೆಯಲಿರುವ ಚುನಾವಣೆ ಹಾಗೂ ಫಲಿತಾಂಶವು ರಾಷ್ಟ್ರ ರಾಜಕಾರಣದಲ್ಲಿ ಬದಲಾವಣೆಯ ಬಿರುಗಾಳಿ ಬೀಸಲಿದೆ. ಯಾವ ಪಕ್ಷ ಗೆಲುವಿನ ಗದ್ದುಗೆ ಏರುವುದೋ ಆ ಗೆಲುವು ಇಡೀ ರಾಷ್ಟ್ರಕ್ಕೆ ದಿಕ್ಸೂಚಿಯಾಗಲಿದೆ ಎಂದಿದ್ದಾರೆ.
ಹೆಣ್ಣಿಗೆ ಎದುರಾಗುತ್ತಿರುವ ಅನ್ಯಾಯಗಳನ್ನು ತಡೆಗಟ್ಟಬೇಕು ಹಾಗೂ ಮಠಗಳು ಮತ್ತು ದೇವಾಲಯಗಳಲ್ಲಿ ಸರಕಾರ ಹಸ್ತಕ್ಷೇಪ ಮಾಡಬಾರದು. ದೇವಾಲಯಗಳು ಭಕ್ತರ ಆಸ್ತಿ. ಇಂತಹ ದೇವಾಲಯಗಳ ಹಣವನ್ನು ಸರಕಾರಗಳು ಬಳಸಿಕೊಳ್ಳುವಂತಹ ಕೆಲಸ ಎಂದೂ ನಡೆಯಬಾರದು. ಮತ್ತು ಮಂಗಳವಾರ (ಮೇ 27ರಂದು) ಶನೈಶ್ಚರ ಜಯಂತಿ ಇರುವುದರಿಂದ ಅಂದು ದೇಶದ 142 ಕೋಟಿ ಜನರು ವಿಶೇಷವಾಗಿ ಪ್ರಾರ್ಥನೆ ಸಲ್ಲಿಸಬೇಕು. ಶನಿಯು ಒಲಿದು ಬರುತ್ತಾನೆ ಜೊತೆಗೆ ಕಷ್ಟಗಳು ದೂರವಾಗುತ್ತವೆ ಎಂದಿದ್ದಾರೆ.
Comments are closed.