Kateel: ಕಟೀಲು ಯಕ್ಷಗಾನದ 7ನೇ ಮೇಳಕ್ಕೆ ತಯಾರಿ-ಹರಿನಾರಾಯಣದಾಸ ಆಸ್ರಣ್ಣ

Share the Article

Kateel: ಕಟೀಲು ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಬಯಲಾಟ ಮೇಳದ ಮುಂದಿನ ವರ್ಷದ ತಿರುಗಾಟದಲ್ಲಿ 7ನೇ ಮೇಳವನ್ನು ಆರಂಭಿಸಲಾಗುವುದು ಎಂದು ಕಟೀಲು ದೇವಸ್ಥಾನದ ಅನುವಂಶಿಕ ಅರ್ಚಕ ಹರಿನಾರಾಯಣದಾಸ ಅಸ್ರಣ್ಣ ತಿಳಿಸಿದ್ದಾರೆ. ಭಾನುವಾರ ಪತ್ತನಾಜೆಯ ಶುಭದಿನ ದೇವಿಯ ಸನ್ನಿಧಾನದಲ್ಲಿ ಹೂವಿನ ಪ್ರಸಾದದ ಮೂಲಕ ದೇವರ ಅಪ್ಪಣೆ ಪಡೆದು ಮೇಳವನ್ನು ಆರಂಭಿಸಲು ತಯಾರಿ ನಡೆಸಲಾಗಿದೆ ಎಂದರು.

ಮೇಳಕ್ಕೆ ಎಲ್ಲಾ ಪರಿಕರಗಳು ದಾನಿಗಳ ಮೂಲಕ ಸಲ್ಲಿಕೆಯಾಗಿದೆ. ಹೊಸ ಕಲಾವಿದರ ಜೊತೆಗೆ ಅನುಭವಿ ಕಲಾವಿದರ ಸೇರ್ಪಡೆ ಆಗಲಿದೆ. ನವೆಂಬರ್‌ 16 ರಂದು ಅಂತಿಮ ಪಟ್ಟಿಯನ್ನು ತಿಳಿಸಲಾಗುವುದು. ಹವ್ಯಾಸಿ ಕಲಾವಿದರ ಜೊತೆ ಮೇಳದ ಖಾಯಂ ಕಲಾವಿದರು 7 ಮೇಳಗಳ ತಿರುಗಾಟದಲ್ಲಿ ಭಾಗವಹಿಸಲಿದ್ದಾರೆ.

ಈ ಬಾರಿ ಹೊಸತಾಗಿ 844 ಯಕ್ಷಗಾನ ಸೇವೆ ಆಟಗಳು ನಿಗದಿಯಾಗಿದೆ. ಈಗಾಗಲೇ ಏಳು ಸಾವಿರದಷ್ಟು ಸೇವೆ ಆಟ ಉಳಿದಿದೆ. ಇದನ್ನು ಮನಗಂಡು ಆಡಳಿತ ಮಂಡಳಿಯ ತೀರ್ಮಾನದ ಜೊತೆಗೆ ದೇವಿಯ ಅಪ್ಪಣೆಯಂತೆ ಮೇಳವನ್ನು ಆರಂಭಿಸಲಾಗುತ್ತದೆ ಎಂದು ಹೇಳಿದರು.

Comments are closed.