Physically Assaulted: ಬೇಸಿಗೆ ಶಿಬಿರದಲ್ಲಿ ಎರಡೂವರೆ ವರ್ಷದ ಮಗು ಮೇಲೆ ನೃತ್ಯ ಶಿಕ್ಷಕನಿಂದ ಅತ್ಯಾಚಾರ

Share the Article

Physically Assaulted: ಎರಡೂವರೆ ವರ್ಷದ ಮಗುವಿನ ಮೇಲೆ ಬೇಸಿಗೆ ಶಿಬಿರದಲ್ಲಿ ಶಿಕ್ಷಕನೊಬ್ಬ ಅತ್ಯಾಚಾರ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಗುವಿನ ಮೇಲೆ ಅತ್ಯಾಚಾರ ಮಾಡಿದ ವ್ಯಕ್ತಿ 45 ವರ್ಷದ ನೃತ್ಯ ಶಿಕ್ಷಕನನ್ನು ಬಂಧನ ಮಾಡಲಾಗಿರುವ ಕುರಿತು ಪೊಲೀಸರು ತಿಳಿಸಿದ್ದಾರೆ.

ಮನೆಗೆ ಬಂದ ಮಗು ತೀವ್ರ ನೋವಿನಿಂದ ಬಳಲುತ್ತಿದ್ದು, ಆಗ ಘಟನೆ ಕುರಿತು ತಿಳಿದು ಬಂದಿದೆ. ಏನಾಗಿದೆ ಎಂದು ಹೇಳಲು ಬಾರದ ಮಗು ಪೋಷಕರು ಇದರ ಕುರಿತು ತಿಳಿದಾಗ, ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

ಉಲ್ಲಾಸ್‌ನಗರ ಡಿಸಿಪಿ ಸಚಿನ್‌ ಗೋರ್‌ ಮತ್ತು ವಿಠ್ಠಲವಾಡಿ ಪೊಲೀಸ್‌ ಠಾಣೆಯ ಹಿರಿಯ ಅಧಿಕಾರಿ ಅನಿಲ್‌ ಪಡ್ವಾಲ್‌ ಅವರ ಮಾರ್ಗದರ್ಶನದಲ್ಲಿ ಆರೋಪಿಯನ್ನು ಆತನ ಮನೆಯಿಂದ ಬಂಧನ ಮಾಡಲಾಗಿದೆ. ನಂತರ ಉಲ್ಲಾಸ್‌ನಗರ ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಆರೋಪಿಯನ್ನು ಮೂರು ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಕಳುಹಿಸಲಾಗಿದೆ.

Comments are closed.