ಬೀದಿಬದಿ ವ್ಯಾಪಾರಿಗಳಿಗೆ ಇನ್ನು ಮುಂದೆ ಲೈಸನ್ಸ್ ಕಡ್ಡಾಯ, ವ್ಯಾಪಾರಿಗಳಿಂದ ಭಾರಿ ಆಕ್ರೋಶ!

Share the Article

Bengaluru; ಬೀದಿಬದಿ ವ್ಯಾಪಾರ ಮಾಡುತ್ತಾ ತಮ್ಮ ಹೊಟ್ಟೆಪಾಡನ್ನು ನಿರ್ವಹಿಸಿಕೊಳ್ಳುತ್ತಿದ್ದ ಬೆಂಗಳೂರಿನ ಅದೆಷ್ಟೋ ಬೀದಿಬದಿ ವ್ಯಾಪಾರಕ್ಕೆ ಇನ್ನುಮುಂದೆ ಲೈಸನ್ಸ್ ಕಡ್ಡಾಯವೆಂಬ ಕಾನೂನನ್ನು ಗ್ಯಾರಂಟಿ ಕೈ ಸರ್ಕಾರ ಜಾರಿಗೊಳಿಸಲು ಮುಂದಾಗಿದೆ. ಇದರಿಂದ ಆತಂಕಕ್ಕೊಳಗಾಗಿರುವ ರಾಜ್ಯದ ಬೀದಿಬದಿ ವ್ಯಾಪಾರಿಗಳು ಇದೀಗ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶಿತರಾಗಿದ್ದಾರೆ.
ಡಿಸಿಎಂ ಡಿಕೆಶಿ ಕುಮಾರ್ ನೇತೃತ್ವದ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದ್ದು ಇನ್ನು ಕೆಲವೇ ಕೆಲವು ದಿನಗಳಲ್ಲಿ ಈ ಕಾನೂನು ಜಾರಿಯಾಗಲಿದೆ. ಈಗಾಗಲೇ ಬೆಂಗಳೂರಿನಲ್ಲಿ ಒಟ್ಟು 27,665 ಮಂದಿ ಬೀದಿಬದಿ ವ್ಯಾಪಾರಿಗಳು ರಿಜಿಸ್ಟರ್ ಮಾಡಿಕೊಂಡಿದ್ದು ಮುಂದಿನ ದಿನಗಳಲ್ಲಿ ಇವರಿಗೆ ಸರ್ಕಾರ ಹೇಳಿದ ಕಡೆ ಮಾತ್ರ ತಳ್ಳುಗಾಡಿಗಳನ್ನು ನೀಡಿ ಬೀದಿಬದಿ ವ್ಯಾಪಾರ ನಡೆಸುವ ವ್ಯವಸ್ಥೆಯನ್ನು ಮಾಡಲಾಗುವುದೆಂದು ಡಿಸಿಎಂ ಡಿಕೆಶಿ ಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಇದೇ ರೀತಿ ಇನ್ನು ಮುಂದೆ ಬೆಂಗಳೂರಿನ ಅತ್ಯಂತ ಇರುವ ಎಲ್ಲಾ ಬೀದಿಬದಿ ವ್ಯಾಪಾರಿಗಳು ನೋಂದಾವಣೆಯನ್ನು ಮಾಡಿಕೊಂಡು ಸರ್ಕಾರ ಕೊಡ ಮಾಡುವ ತಳ್ಳುಗಾಡಿಗಳಲ್ಲಿ ಮಾತ್ರ, ಸರಕಾರ ಹೇಳಿದ ಕಡೆಗಳಲ್ಲಿಯೇ ನೀತಿ ಬದಿ ವ್ಯಾಪಾರವನ್ನು ಮಾಡಬೇಕಾಗುತ್ತದೆ.
ಆದರೆ ನಮ್ಮ ನಮ್ಮ ಏರಿಯಾಗಳಲ್ಲೇ ಸಣ್ಣಪುಟ್ಟ ಅಂಗಡಿ, ಕ್ಯಾಂಟೀನ್, ತಳ್ಳುಗಾಡಿ ಇತ್ಯಾದಿಗಳನ್ನು ಇಟ್ಟು ವ್ಯಾಪಾರ ನಡೆಸುತ್ತಾ ಹೇಗೋ ಹೊಟ್ಟೆ ಹೊರೆದು ಕೊಳ್ಳುತ್ತಿರುವ ನಮಗೆ ಮುಂದೆ ಈ ಕಾನೂನಿನ ಪ್ರಕಾರ ವ್ಯಾಪಾರವೇ ಇಲ್ಲದ ಕಡೆಗಳಲ್ಲಿ ಒಂದು ವೇಳೆ ಸರ್ಕಾರ ವ್ಯಾಪಾರ ನಡೆಸಲು ಅವಕಾಶ ನೀಡಿದರೆ ಬದುಕು ನಡೆಸುವುದಾದರೂ ಹೇಗೆ? ಅದೇ ರೀತಿ ತಳ್ಳುಗಾಡಿಗಳನ್ನು ಮಾರುಕಟ್ಟೆಯ ಒಳಗಿಟ್ಟು ವ್ಯಾಪಾರ ಮಾಡುವುದಾದರೂ ಹೇಗೆ? ಅನ್ನೋದು ಈ ವ್ಯಾಪಾರಿಗಳ ಆತಂಕ.
ಅದೇ ರೀತಿ ಈಗ ಬೆಂಗಳೂರಿಗೆ ಮಾತ್ರ ಸೀಮಿತವಾಗಿರುವ ಈ ಕಾರಣವನ್ನು ಮುಂದೆ ರಾಜ್ಯಾದ್ಯಂತ ಜಾರಿಯಾದರೆ ಬಡವರ ಗತಿ ಏನು? ಎಂದೆಲ್ಲಾ ಬೀದಿ ಬದಿ ವ್ಯಾಪಾರಿಗಳು ತಮ್ಮ ಆತಂಕವನ್ನು ತೋಡಿಕೊಳ್ಳುತ್ತಿದ್ದು ಈ ಗ್ಯಾರಂಟಿ ಸರಕಾರ ಈ ರೀತಿಯಲ್ಲಿ ದಿನಕ್ಕೊಂದು ತಲೆಬುಡವಿಲ್ಲದ ಕಾನೂನುಗಳನ್ನು ತಂದು ಬಡವರ ಮೇಲೆ ಗದಾಪ್ರಹಾರ ನಡೆಸುತ್ತಿರುವುದಕ್ಕೆ ಇದೀಗ ಬೀದಿಬದಿ ವ್ಯಾಪಾರಿಗಳು ತೀವ್ರ ಆತಂಕದ ಜತೆಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

Comments are closed.