Jyothi Malhotra: ಪಾಕ್ ನಲ್ಲಿ ವಿಡಿಯೋ ಮಾಡಲು ಜ್ಯೋತಿಗೆ 6 ಮಂದಿ ಗನ್ ಮ್ಯಾನ್ ಗಳ ಕಾವಲು

Share the Article

Delhi: ಪಾಕ್ ಪರ ಬೇಹುಗಾರಿಕೆ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಜ್ಯೋತಿ ಮಲ್ಹೋತ್ರಾ ಪಾಕಿಸ್ತಾನದಲ್ಲಿ ಗನ್ ಮ್ಯಾನ್ ಗಳ ಸಹಾಯದಿಂದ ವ್ಲಾಗ್ ಮಾಡಿರುವ ವಿಚಾರ ಇದೀಗ ಸ್ಕಾಟಿಷ್ ಯೂಟ್ಯೂಬರ್ ಕ್ಯಾಲಮ್ ಮಿಲ್ ಅವರ ವಿಡಿಯೋ ಮೂಲಕ ಹೊರಬಿದ್ದಿದೆ. ಪಾಕಿಸ್ತಾನ ಭಾರತೀಯರಿಗೆ ಅದರಲ್ಲೂ ಭಾರತದ ಮಹಿಳೆಯರಿಗೆ ಸುರಕ್ಷಿತವಲ್ಲ, ಜ್ಯೋತಿ ಮಲ್ಹೋತ್ರಾ ಹೇಗೆ ವಿಡಿಯೋ ಮಾಡಿದ್ದಾಳೆ ಎಂಬ ಭಾರತೀಯರ ಪ್ರಶ್ನೆಗೆ ಈ ವಿಡಿಯೋ ಮೂಲಕ ಉತ್ತರ ಸಿಕ್ಕಿದೆ.

ʼಕ್ಯಾಲಮ್ ಅಬ್ರಾಡ್ʼ ಹೆಸರಿನಲ್ಲಿ ಚಾನೆಲಿನಲ್ಲಿ ಅವರು ತನ್ನ ಪಾಕ್‌ ಪ್ರವಾಸದ ವಿಡಿಯೋವನ್ನು ಅಪ್ಲೋಡ್‌ ಮಾಡಿದ್ದು ಜ್ಯೋತಿಯನ್ನು ಮಾತನಾಡಿಸಿದ್ದಾರೆ. ಲಾಹೋರಿನ ಅನಾರ್ಕಲಿ ಬಜಾರ್‌ನಲ್ಲಿ ಕ್ಯಾಲಮ್ ಮಿಲ್ ಸುತ್ತಾಡುತ್ತಿದ್ದಾಗ ಜ್ಯೋತಿ ಎದುರಾಗಿದ್ದು, ಇಬ್ಬರ ನಡುವಿನ ಸಣ್ಣ ಮಾತುಕತೆ ವಿಡಿಯೋದಲ್ಲಿ ಜ್ಯೋತಿಯೊಡನೆ 6 ಮಂದಿ ಗನ್ ಮ್ಯಾನ್ ಇರುವುದು ಕಂಡುಬಂದಿದೆ. ಹಾಗೂ ವಿಡಿಯೋದಲ್ಲಿ ತಾನು ಮೊದಲ ಬಾರಿಗೆ ಪಾಕ್ ಗೆ ಬಂದಿದ್ದಾಗಿಯೂ ಹಾಗೂ ಅಲ್ಲಿಯವರ ಆತಿಥ್ಯ ಚೆನ್ನಾಗಿರುವುದಾಗಿಯೂ ಜ್ಯೋತಿ ಹೇಳಿಕೊಂಡಿದ್ದಾಳೆ.

ಪಾಕಿಸ್ತಾನದ ಭದ್ರತಾ ಮತ್ತು ಗುಪ್ತಚರ ಅಧಿಕಾರಿಗಳು ಭಾಗವಹಿಸಿದ್ದ ಉನ್ನತ ಮಟ್ಟದ ಪಾರ್ಟಿಗಳಿಗೆ ಆಕೆಯನ್ನು ಆಹ್ವಾನಿಸಲಾಗಿತ್ತು ಎಂದು ವರದಿಯಾಗಿದೆ. ಪ್ರಸ್ತುತ ಆಕೆ ಹರ್ಯಾಣದ ಹಿಸ್ಸಾರ್‌ ಪೊಲೀಸರ ಕಸ್ಟಡಿಯಲ್ಲಿದ್ದು, ಆಕೆಯಿಂದ ಮೂರು ಮೊಬೈಲ್ ಫೋನ್‌ಗಳು, ಒಂದು ಲ್ಯಾಪ್‌ಟಾಪ್ ಮತ್ತು ಇತರ ಕೆಲವು ಎಲೆಕ್ಟ್ರಾನಿಕ್ ಸಾಧನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Comments are closed.