Mandya Incident: ʼನಾನೇ 10 ಲಕ್ಷ ಪರಿಹಾರ ಕೊಡ್ತೀನಿ, ನನ್ನ ಮಗಳನ್ನು ತಂದುಕೊಡಿʼ- ತಂದೆ ಕಣ್ಣೀರು

Share the Article

Mandya Incident: ಮಂಡ್ಯದ ಸ್ವರ್ಣಸಂದ್ರ ಬಳಿ ಹೆಲ್ಮೆಟ್‌ ತಪಾಸಣೆ ಸಂದರ್ಭ ಪೊಲೀಸರು ಅಡ್ಡಗಟ್ಟಿದಾಗ ಬೈಕ್‌ ಸ್ಕಿಡ್‌ ಆಗಿ ಮೂರುವರೆ ವರ್ಷದ ಮಗುವಿನ ಜೀವ ಹೋಗಿದ್ದು, ಪೋಷಕರು ಕಣ್ಣೀರಿಡುವ ದೃಶ್ಯ ಎಲ್ಲರ ಕಣ್ಣಾಲಿಗಳನ್ನು ಒದ್ದೆ ಮಾಡಿದೆ.

ಮಗು ಹೃತೀಕ್ಷಗೆ ನಾಯಿ ಕಚ್ಚಿದ್ದು, ಅಪ್ಪ ಅಮ್ಮ ತರಾತುರಿಯಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಪೊಲೀಸರು ಬೈಕ್‌ ಅಡ್ಡಗಟ್ಟಿದ್ದಾರೆ. ಮಗು ಕಳೆದುಕೊಂಡ ನೋವಿನಲ್ಲ್ಲಿ ತಂದೆ, ಪಾಪುಗೆ ನಾಯಿ ಕಚ್ಚಿತ್ತು. ಮದ್ದೂರಿನಿಂದ ಕರೆದುಕೊಂಡು ಬಂದ್ವಿ, ಇಲ್ಲಿನ ಸರ್ವಿಸ್‌ ರಸ್ತೆಯಲ್ಲಿ ಗಾಡಿ ಅಡ್ಡ ಹಾಕಿದ್ದಾರೆ.

ನಾವು ಆಸ್ಪತ್ರೆಗೆ ಹೊರಟಿದ್ವಿ ಎಂದಾಗ ಮೂವ್‌ ಮಾಡಲು ಕೊಟ್ಟಿಲ್ಲ. ಗಾಡಿ ಅಡ್ಡ ಹಾಕಿದ್ದಾರೆ. ಆಗ ನಮ್ಮ ಬೈಕ್‌ ಸ್ಕಿಡ್‌ ಆಗಿದೆ. ಮಗು ಬಿದ್ದಿದೆ. ಕೂಡಲೇ ಬೇರೆ ವಾಹನ ಬಂದು ಪಾಪು ಮೇಲೆ ಹತ್ತಿದೆ. ಅವರಿಗೆ ಬ್ಯಾಂಡೇಜ್‌ ಹಾಕಿದ್ದು ಕಾಣಿಸಿಲ್ವ? ಇವರ ದುಡ್ಡನ್ನು ತಿಂದು ಹೋಗ್ತೀವಾ? ನನ್ನ ಮಗಳಿಗೆ ಪರಿಹಾರ ಕೊಡ್ತಾರಂತೆ. ನಾನೇ ಹತ್ತು ಲಕ್ಷ ಕೊಡ್ತೀನಿ ಸ್ವಾಮಿ. ನೀವು ನನ್ನ ಮಗಳನ್ನು ತಂದು ಕೊಡ್ತೀರಾ? ಎಂದು ಕಣ್ಣೀರು ಹಾಕುತ್ತಾ ಹೇಳಿದ್ದಾರೆ.

Comments are closed.