Corruption: ಕೋಟಿ ಹಣ ಲೂಟಿ! ಎರಡನೇ ಬಾರಿಗೆ ಕುಸಿತ ಕಂಡ ಮುರಾರ್ಜಿ ವಸತಿ ಶಾಲೆಯ ತಡೆಗೋಡೆ

Corruption: ವಿರಾಜಪೇಟೆ(Virajapete) ಪೆರಂಬಾಂಡಿಯ ಮೊರಾರ್ಜಿ ವಸತಿ ಶಾಲೆಯ ತಡೆಗೋಡೆ ಮಳೆಯಿಂದ ಕುಸಿದಿದೆ. ಈ ಹಿಂದೆ ಒಂದು ಭಾಗ ಕುಸಿತ ಕಂಡಿತ್ತು. ಇದೀಗ ಮೊದಲ ಮಳೆಗೆ ಎರಡನೇ ಬಾರಿ ತಡೆಗೋಡೆ ಕುಸಿತ ಗೊಂಡಿದೆ. ನಿರ್ಮಿತಿ ಕೇಂದ್ರದವರು ಈ ಕಾಮಗಾರಿಯನ್ನು ಕೈಗೊಂಡಿದ್ದಾರೆ. ಇದೇ ರೀತಿ ಕೆಲವು ದಿನಗಳ ಹಿಂದೆ ವಿರಾಜಪೇಟೆ ನಗರದ ಅಂಬೇಡ್ಕರ್ ಭವನದ ತಡೆಗೋಡೆ ಕುಸಿತಗೊಂಡಿತ್ತು. ಈ ಕಾಮಗಾರಿಯನ್ನು ಕೂಡ ನಿರ್ಮಿತಿ ಕೇಂದ್ರವೇ ಕೈಗೊಂಡ್ಡಿತು.

ಇದೀಗ ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಮತ್ತೊಂದು ತಡೆಗೋಡೆ ಕುಸಿತಕಂಡಿದೆ. ನಿರ್ಮಿತಿ ಕೇಂದ್ರವೆಂಬ ಸರಕಾರಿ ಸೌಮ್ಯದ ಸಂಸ್ಥೆ ಹಲವರ ಬದುಕನ್ನು ಈ ರೀತಿ ಕಾಮಗಾರಿಯಿಂದ ರೂಪಿಸುದೆ ಎನ್ನುತ್ತಾರೆ ಹಲವರು.
Comments are closed.