Bajegoli: ಬಜಗೋಳಿ ಕೆರ್ವಾಶೆ ರಸ್ತೆ ಬಂದ್!

Bajegoli: ಬಜಗೋಳಿಯಿಂದ (Bajegoli) ಕೆರ್ವಾಶೆ ಅಜೆಕಾರು ಸಂಪರ್ಕದ ರಸ್ತೆಯನ್ನು ಇಂದು ಬೆಳಿಗ್ಗೆಯಿಂದ ಬಂದ್ ಮಾಡಲಾಗಿದೆ.

ಮುಡಾರು ಗ್ರಾಮ ವ್ಯಾಪ್ತಿಯ ರಾಮೇರ್ ಗುತು ಬಳಿ ಹೊಸದಾದ ಸೇತುವೆಯ ಕಾಮಗಾರಿ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಪರ್ಯಾಯ ರಸ್ತೆ ಮಾಡಲಾಗಿತ್ತು ಆದರೆ ವಿಪರೀತ ಮಳೆಯಿಂದಾಗಿ ಆ ರಸ್ತೆ ಸಂಚಾರಿಸಲು ಯೋಗ್ಯವಾಗಿಲ್ಲ.
ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯತ್ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಹೀಗಾಗಿ ಬಜಗೋಳಿ ಕ್ರಾಸಿನಿಂದ ಅಜೆಕಾರು ಹೆಬ್ರಿ ಸಂಪರ್ಕಿಸುವ ರಸ್ತೆಯನ್ನು ಬಂದ್ ಮಾಡಲಾಗಿದೆ ಪರ್ಯಾಯ ರಸ್ತೆಯನ್ನು ಉಪಯೋಗಿಸಿ ಎಂದು ಸ್ಥಳೀಯರು ತಿಳಿಸಿದ್ದಾರೆ.
Comments are closed.