Vijalalakshmi: ‘ನಟ ಜಗ್ಗೇಶ್ ನನ್ನ ಗಂಡ’ – ಸ್ಪೋಟಕ ಸತ್ಯ ಬಿಚ್ಚಿಟ್ಟ ಖ್ಯಾತ ನಟಿ ವಿಜಯಲಕ್ಷ್ಮಿ!!

Share the Article

Vijalalakshmi : ಒಂದಾನೊಂದು ಕಾಲದಲ್ಲಿ ತಮ್ಮ ನಟನೆ ಹಾಗೂ ಸೌಂದರ್ಯದ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ವಿಜಯಲಕ್ಷ್ಮಿ ಅವರು ಇದೀಗ ತಮ್ಮ ವಿಚಿತ್ರವಾದ ಹೇಳಿಕೆಗಳಿಂದ ಸುದ್ದಿಯಾಗುತ್ತಿದ್ದಾರೆ. ಇದೀಗ ಅಚ್ಚರಿ ಎಂಬಂತೆ ವಿಜಯಲಕ್ಷ್ಮಿಯವರು ‘ಕನ್ನಡದ ನಟ ಜಗ್ಗೇಶ್ ಅವರು ನನ್ನ ಗಂಡ’ ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ

ಹೌದು, ರಾಜೇಶ್​ ಗೌಡ ಅವರ ಯೂಟ್ಯೂಬ್​ ಚಾನೆಲ್‌ಗೆ ವಿಜಯಲಕ್ಷ್ಮಿ ನೀಡಿದ ಸಂದರ್ಶನದಲ್ಲಿ ಹಲವಾರು ಅಚ್ಚರಿ ವಿಷಯಗಳನ್ನು ಬಹಿರಂಗ ಪಡಿಸಿದ್ದಾರೆ. ಈ ಪೈಕಿ “ನಟ ಜಗ್ಗೇಶ್‌ ಅವರು ನನ್ನ ಪತಿ” ಎನ್ನುವ ಸುದ್ದಿಯ ವಿಚಾರವಾಗಿ ಆಘಾತಕಾರಿ ಮಾಹಿತಿ ಬಿಚ್ಚಿಟ್ಟಿದ್ದಾರೆ.

ತಮಿಳುನಾಡು ಎನ್‌ಟಿಕೆ ಪಕ್ಷದ ನಾಯಕ, ಚಿತ್ರ ನಿರ್ದೇಶಕ ಸೀಮಾನ್‌ ಅವರು ಪತ್ರಿಕಾಗೋಷ್ಠಿಯಲ್ಲಿ.. ನಟ ಜಗ್ಗೇಶ್‌ ನನ್ನ ಪತಿ.. ಎಂದು ಸುಳ್ಳು ಹೇಳಿದ್ದರು. ಈ ವಿಚಾರ ನನ್ನ ವೃತ್ತಿ ಜೀವನದ ಮೇಲೆ ಗಂಭೀರ ಪರಿಣಾಮ ಬೀರಿತ್ತು, ನನ್ನ ಮಾನ ಮರ್ಯಾದೆ ಹರಾಜು ಹಾಕಿದ್ದೂ ಅಲ್ಲದೇ, ಜಗ್ಗೇಶ್‌ ಅವರ ವಿರುದ್ಧ ಅಪಪ್ರಚಾರ ಮಾಡಿದ್ದರು ಅಂತ ಶಾಕಿಂಗ್‌ ವಿಚಾರ ತಿಳಿಸಿದರು.

ಅಂದಹಾಗೆ ನಟಿ ವಿಜಯಲಕ್ಷ್ಮಿ ಅವರು “ನಾಗಮಂಡಲ” ಸಿನಿಮಾದ ಮೂಲಕ ಕನ್ನಡ ಸಿನಿರಂಗಕ್ಕೆ ಕಾಲಿಟ್ಟ ಸುಂದರಿ, ತಮ್ಮ ಸೌಂದರ್ಯ ಮತ್ತು ನಟನೆಯ ಮೂಲಕ ಸ್ಯಾಂಡಲ್‌ವುಡ್ ಸಿನಿ ಪ್ರೇಕ್ಷಕರ ಗಮನಸೆಳೆಯುವಲ್ಲಿ ಯಶಸ್ವಿಯಾದರು. ನಂತರ, ಜೋಡಿ ಹಕ್ಕಿ, ಭೂಮಿ ತಾಯಿಯ ಚೊಚ್ಚಲ ಮಗ, ಸೂರ್ಯವಂಶ, ಸ್ವಸ್ತಿಕ್‌, ಹೀಗೆ ಸಾಕಷ್ಟು ಹಿಟ್‌ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

Comments are closed.