Crime: ಸಕಲೇಶಪುರ ಶಾಸಕ ಪೊನ್ನಣ್ಣನ ಆಪ್ತ ಸಹಾಯಕನ ಪತ್ನಿ ಶಿಕ್ಷಕಿ ವಿಷ ಸೇವಿಸಿ ಆತ್ಮಹತ್ಯೆ!

Share the Article

ಸಕಲೇಶಪುರ: ಸಕಲೇಶಪುರ ಶಾಸಕ ಪೊನ್ನಣ್ಣನವರ ಆಪ್ತ ಸಹಾಯಕ ಹಾಗೂ ಹಿಂದೆ ಮಾಜಿ ಸಚಿವ ಎಚ್. ಡಿ ಕುಮಾರಸ್ವಾಮಿಯವರ ಮಾಜಿ ಆಪ್ತ ಸಹಾಯಕರೂ ಆಗಿದ್ದ ಮಹೇಂದ್ರ ಅವರ ಪತ್ನಿ ಶಿಕ್ಷಕಿಯಾಗಿದ್ದ ಶೃತಿ (35) ಅವರು ವಿಷ ಸೇವಿಸಿ ಆತ್ಮಹತ್ಯೆಗೆಶರಾದ ಘಟನೆ ಸಕಲೇಶಪುರದ ನಗರದ ಪಿಡಬ್ಲ್ಯೂಡಿ ಕ್ವಾಟರ್ಸ್ ನಲ್ಲಿ ನಡೆದಿದೆ.

ಮೃತಶ್ರುತಿ ಸಕಲೇಶಪುರ ತಾಲೂಕಿನ ಕಲ್ಗೆಣಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು.ಆದರೆ ಇವರು ಇತ್ತೀಚಿನ ಕೆಲವು ಸಮಯಗಳಿಂದಿಚೆಗೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದರೆನ್ನಲಾಗಿದೆ .ನಿನ್ನೆ ದಿನ ಇವರು ಇದ್ದಕ್ಕಿದ್ದಂತೆ ವಿಷ ಸೇವಿಸಿ ಗಂಭೀರ ಸ್ಥಿತಿಗೆ ಒಳಗಾಗಿದ್ದರು. ಹೀಗಾಗಿ ತಕ್ಷಣ ಅವರನ್ನು ಚಿಕಿತ್ಸೆಗಾಗಿ ಹಾಸನದ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ.

ಮೃತರ ಅಂತ್ಯಕ್ರಿಯೆ ಇಂದು (ಭಾನುವಾರ) ಆಲೂರು ತಾಲೂಕಿನ ಗಂಜಿಗೆರೆಯಲ್ಲಿ ನಡೆಯಲಿದೆ. ಆತ್ಮಹತ್ಯೆಗೂ ಮುನ್ನ ಅವರು ಡೆತ್ ನೋಟ್ ಬರೆದಿಟ್ಟಿದ್ದು ಇದರಲ್ಲಿ” ತಾನು ಕೆಲವು ದಿನಗಳಿಂದೀಚೆಗೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದೇನೆ. ನನ್ನ ಗಂಡ ನನ್ನ ನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ಮುಂದೆ ನನ್ನ ಮಕ್ಕಳನ್ನು ಚೆನ್ನಾಗಿ ಓದಿಸಿ. ಎಂದು ಉಲ್ಲೇಖಿಸಿದ್ದಾರೆ ಎಂದು ತಿಳಿದುಬಂದಿದೆ.

Comments are closed.