Covid: ಗರಿಗೆದರಿದ ಕೋವಿಡ್: 1 ಸಾವಿನ ಬೆನ್ನಲ್ಲೇ ಮಲ್ಲೇಶ್ವರಂ, ರಾಜಾಜಿನಗರದ ಇಬ್ಬರಿಗೆ ಕೊರೊನಾ ಪಾಸಿಟಿವ್

Share the Article

ಬೆಂಗಳೂರು: ಮಹಾಮಾರಿ ಕೊರೊನಾ ( Corona) ರಾಜ್ಯದಲ್ಲಿ ಮತ್ತೆ ಹರಡುವ ಲಕ್ಷಣ ತೋರುತ್ತಿದೆ. ನಿನ್ನೆಯಷ್ಟೇ ಕೋರೋನಾದಿಂದ ಬೆಂಗಳೂರಿನಲ್ಲಿ ಒಂದು ಸಾವು ಉಂಟಾಗಿತ್ತು. ಇದೀಗ, ಮಲ್ಲೇಶ್ವರಂ, ರಾಜಾಜಿನಗರದ ಇಬ್ಬರಿಗೆ ಕೋವಿಡ್ ಪಾಸಿಟಿವ್ ಕಾಣಿಸಿದೆ. ಇದು ಒಂದು ರೀತಿಯ ಆತಂಕದ ಪರಿಸ್ಥಿತಿ.

ಬೆಂಗಳೂರಿನ ಮಲ್ಲೇಶ್ವರಂನ (Malleshwaram) 45 ವರ್ಷದ ವ್ಯಕ್ತಿಗೆ ಹಾಗೂ ರಾಜಾಜಿನಗರದ 38 ವರ್ಷದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಆಗಿದೆ. ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದೇ ಇವರಿಬ್ಬರಿಗೂ ಕೋವಿಡ್ ಕಾಣಸಿಕೊಂಡಿದ್ದು, ಇಬ್ಬರನ್ನು ಸದ್ಯಕ್ಕೆ ಹೋಂ ಐಸೊಲೇಷನ್‌ನಲ್ಲಿ ಇರಿಸಲಾಗಿದೆ.

ಬೆಂಗಳೂರಿನಲ್ಲಿ ವೈಟ್‌ಫೀಲ್ಡ್‌ನ 84 ವರ್ಷದ ವೃದ್ಧರು ಮೇ 17ರಂದು ಕೊರೊನಾಗೆ ಬಲಿಯಾಗಿದ್ದರು. ಮೇ 13ರಂದು ಆಸ್ಪತ್ರೆಗೆ ದಾಖಲಾಗಿದ್ದ ಅವರು, ಕೊರೊನಾಗೆ ತುತ್ತಾಗಿ ಮೃತಪಟ್ಟಿದ್ದಾರೆ .ಸದ್ಯಕ್ಕೆ ರಾಜ್ಯದಲ್ಲಿ ಒಟ್ಟು 38 ಸಕ್ರಿಯ ಕೋವಿಡ್ ಕೇಸ್ ಇವೆ. ಬೆಂಗಳೂರಿನಲ್ಲಿ 9 ತಿಂಗಳ ಮಗು ಸೇರಿ ಒಟ್ಟು ಮೂರು ಜನ ಮಕ್ಕಳಿಗೆ ಕೋವಿಡ್ ಪಾಸಿಟಿವ್(Covid Positive) ಆಗಿದ್ದು, ಈ ಎಲ್ಲಾ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ಎಂಬ ಮಾಹಿತಿಯಿದೆ.

ಇನ್ನೂ ರಾಜ್ಯದಲ್ಲಿ ಶನಿವಾರ 108 ಮಂದಿಗೆ ಕೊರೊನಾ ಟೆಸ್ಟ್ ಮಾಡಲಾಗಿದ್ದು, ಅವರಲಿ ಐವರಿಗೆ ಕೋವಿಡ್ ಬಂದಿದೆ. ಅಲ್ಲದೆ, ನಿನ್ನೆ ಶನಿವಾರ ಬೆಂಗಳೂರಲ್ಲಿ 2, ಮೈಸೂರು 2 ಕೋವಿಡ್ ಪ್ರಕರಣ ಪತ್ತೆಯಾಗಿತ್ತು.

Comments are closed.