Tiruvananthapuram: ಸರಕು ಸಾಗಣೆ ಹಡಗಿನಲ್ಲಿದ್ದ ತೈಲ ಕಂಟೇನರ್‌ಗಳು ಸಮುದ್ರಪಾಲು

Tiruvananthapuram: ಕೊಚ್ಚಿಗೆ ಬರುತ್ತಿದ್ದ ಸರಕು ಸಾಗಣೆ ಹಡಗಿನಲ್ಲಿದ್ದ ತೈಲ ತುಂಬಿದ ಕಂಟೇನರ್‌ಗಳು ಸಮುದ್ರ ಪಾಲಾಗಿದ್ದು, ಸುಮಾರು 10 ಕಂಟೇನರ್‌ಗಳು ಸಮುದ್ರ ಪಾಲಾಗಿದ್ದು, ಜನರು ಆತಂಕಗೊಂಡಿದ್ದಾರೆ. ಕೊಚ್ಚಿ ಕರಾವಳಿಯಿಂದ ನೈರುತ್ಯಕ್ಕೆ 38ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಅರಬ್ಬಿ ಸಮುದ್ರದಲ್ಲಿ ಈ ಅಪಘಾತ ಸಂಭವಿಸಿದೆ.

ಕಂಟೇನರ್‌ಗಳು ದಡಕ್ಕೆ ಬಂದರೆ ಇವುಗಳ ಬಳಿ ತೆರಳದಂತೆ ಕೇರಳ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣೆ ಪ್ರಾಧಿಕಾರು ಸಾರ್ವಜನಿಕರಿಗೆ ಎಚ್ಚರಿಸಿದೆ. ರಕ್ಷಣಾ ತಂಡಗಳು ಈಗಾಗಲೇ ಸ್ಥಳಕ್ಕೆ ಧಾವಿಸಿದ್ದು, ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದೆ.
ಹಡಗಿನಲ್ಲಿದ್ದ ಎಲ್ಲಾ 24 ಸಿಬ್ಬಂದಿಗಳನ್ನು ಕರಾವಳಿ ಕಾವಲು ಪಡೆ ಮತ್ತು ನೌಕಾಪಡೆ ರಕ್ಷಣೆ ಮಾಡಿದೆ. ಕಂಟೇರ್‌ನಲ್ಲಿ ಮರೀನ್ ಗ್ಯಾಸ್ ಆಯಿಲ್ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.
@IndiaCoastGuard #MRCC, #Mumbai received a Distress Alert regarding Liberia-flagged container vessel MSC ELSA 3 developing 26° list approx 38 nautical miles southwest of #Kochi. Vessel departed #Vizhinjam Port on 23 May 25, bound for #Kochi with ETA 24 May 25. #ICG is actively… pic.twitter.com/U7SzOBsE9h
— Indian Coast Guard (@IndiaCoastGuard) May 24, 2025
Comments are closed.