Madenuru Manu: ಶಿವರಾಜ್‌ಕುಮಾರ್ ಬದುಕಿದ್ರೆ ಇನ್ನು ಐದಾರು ವರ್ಷ, ದರ್ಶನ್ ಈಗಾಗಲೇ ಔಟ್, ಶೀಘ್ರದಲ್ಲೇ ಧ್ರುವ ಸರ್ಜಾ… – ನಾಲಿಗೆ ಹರಿಬಿಟ್ಟ ಮಡೆನೂರು?!

Share the Article

Madenuru Manu: ಬಹುಶಃ ಮಡೆನೂರು ಮನು ಎಂಜಲು ಎಲ್ಲಾ ಕಡೆ ಸಿಡಿದಿದೆ. ಇತ್ತ ಒಂದು ಕಡೆ ತಮ್ಮ ಅಭಿನಯದ ಕುಲದಲ್ಲಿ ಕೀಳ್ಯಾವುದೋ ಸಿನಿಮಾ ಬಿಡುಗಡೆಯಾಗಿದೆ. ಇನ್ನೊಂದೆಡೆ ಸಹನಟಿಯ ಮೇಲಿನ ಅತ್ಯಾಚಾರ ಆರೋಪದ ಹಿನ್ನೆಲೆಯಲ್ಲಿ ಬಂಧನವಾಗಿ ಜೈಲು ಸೇರಿದ್ದಾರೆ. ಇದು ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು ಅವರ ಸದ್ಯದ ಪರಿಸ್ಥಿತಿ. ಈಗ ಸಂದರ್ಭ ಮತ್ತೊಂದು ವಿವಾದ ಕರ್ನಾಟಕದಲ್ಲಿ ಭಾರಿ ಸದ್ದು ಮಾಡುತ್ತಿದೆ.

ತನಗೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಲ್ಲದೆ, ವಿಡಿಯೋ ರೆಕಾರ್ಡ್ ಕೂಡ ಮಾಡಿಕೊಂಡಿದ್ದಾನೆ ಎಂದು ಆರೋಪಿಸಿ ಮಡೆನೂರು ಮನು ವಿರುದ್ಧ ಸಹನಟಿ ಆರೋಪ ಮಾಡಿದ್ದು, ಎಫ್‌ಐಆರ್ ದಾಖಲಿಸಿರುವ ಅನ್ನಪೂರ್ಣೇಶ್ವರಿ ನಗರ ಠಾಣಾ ಪೊಲೀಸರು ಆರೋಪಿ ಮನುರನ್ನು ಬಂಧಿಸಿದ್ದಾರೆ. ಈ ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ ಮಡೆನೂರು ಮನುದ್ದು ಎನ್ನಲಾದ ಆಡಿಯೋವೊಂದು ವೈರಲ್ ಆಗುತ್ತಿದೆ.

ಮದ್ಯದ ಅಮಲಿನಲ್ಲಿ ಮನು ಮಾತನಾಡಿರುವ ಆಡಿಯೋ ಇದು ಎನ್ನಲಾಗಿದೆ. ಆಡಿಯೋದಲ್ಲಿರುವ ಮಾತುಗಳನ್ನು ಕೇಳಿ ಕನ್ನಡ ಚಿತ್ರರಂಗ ಕಂಪಿಸಿದೆ. ಸಿನಿ ಅಭಿಮಾನಿಗಳು ಕೂಡ ಒಂದು ಕ್ಷಣ ಆಘಾತಕ್ಕೆ, ತಲ್ಲಣಕ್ಕೆ ಒಳಗಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ಆಡಿಯೋದಲ್ಲಿ ನಟ ದರ್ಶನ್ ಅನ್ನು ಹೀನಾಯವಾಗಿ ನಿಂದಿಸಲಾಗಿದೆ. ಈ ಆಡಿಯೋ ನಿಜವಾಗಿಯೂ ನಿಜ ಆಗಿದ್ದರೆ, ಅದು ಮನು ಭವಿಷ್ಯವನ್ನು ಮಂಕಾಗಿಸಲಿದೆ.

ಆಡಿಯೋದಲ್ಲಿ ನಿಜಕ್ಕೂ ಏನಿದೆ?

ಕನ್ನಡ ಚಿತ್ರರಂಗದ ಸ್ಟಾರ್ ನಟರ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ ಎನ್ನಲಾಗುತ್ತಿದೆ. ನಟ ಶಿವರಾಜ್‌ಕುಮಾರ್ ಇನ್ನು ಐದಾರು ವರ್ಷ ಬದುಕಿದರೆ ಹೆಚ್ಚು, ಆನಂತರ ಅವರು ಸತ್ತು ಹೋಗುತ್ತಾರೆ. ನಟ ದರ್ಶನ್ ಈಗಾಗಲೇ ಸತ್ತು ಹೋಗಿದ್ದಾನೆ. ಇನ್ನು ನಾಲ್ಕು ವರ್ಷ ಆತನಿಗೆ ಕ್ರೇಜ್ ಇದ್ರೆ ಅದೇ ಹೆಚ್ಚು. ಶೀಘ್ರದಲ್ಲೇ ಅವನ ಕ್ರೇಜ್ ಕಡಿಮೆಯಾಗಲಿದೆ. ಇನ್ನು ನಟ ಧ್ರುವ ಸರ್ಜಾ ಹೆಚ್ಚೆಂದರೆ 8 ವರ್ಷ ಮಾತ್ರ ಆತನ ಮಾರ್ಕೆಟ್ ಇರಲಿದೆ. ಆಮೇಲೆ ಮಾರ್ಕೆಟ್ ಬಿದ್ದು ಹೋಗಲಿದೆ. ಈ ಮೂರು ಮಂದಿಯ ನಡುವೆ ಕಾಂಪಿಟೇಶನ್ ಕೊಡಲು ನಿಂತಿರುವ ಗಂಡು ಗಲಿ ಕಣೇ ನಾನು ಎಂದು ಕುಡಿದ ಅಮಲಿನಲ್ಲಿ ನಾಲಿಗೆ ಹರಿ ಬಿಟ್ಟು ಮಾತಾಡಿದ್ದಾರೆ ಮನು ಎನ್ನಲಾಗುತ್ತಿದೆ. ಆದರೆ ಆಡಿಯೋದಲ್ಲಿ ಇರುವ ಧ್ವನಿ ಮಡೆನೂರು ಮನು ಅವರ ಧ್ವನಿಯೇ ಎಂಬುದು ಖಚಿತವಾಗಿಲ್ಲ. ಆಡಿಯೋ ಕೇಳಿದ ಬಹುತೇಕ ಮಂದಿ ಇದು ಮನು ಅವರದ್ದೇ ಧ್ವನಿ ಎನ್ನುತ್ತಿದ್ದಾರೆ. ಯಾವುದೂ ಎಣ್ಣೆ ಪಾರ್ಟಿಯ ಸಮಯದಲ್ಲಿ ಕಂಠಪೂರ್ತಿ ಕುಡಿದು ಈ ರೀತಿ ಅಹಂಕಾರದಿಂದ ಮಾತನಾಡಿದ್ದಾನೆ. ಆ ಸಂದರ್ಭದಲ್ಲಿ ಆತನ ಸ್ನೇಹಿತರೇ ಆಡಿಯೋ ರೆಕಾರ್ಡ್ ಮಾಡಿ, ವಿವಾದದ ನಡುವೆ ಹರಿಬಿಟ್ಟಿದ್ದಾರೆ ಎಂದು ಜನರು.ಮಾತನಾಡುತ್ತಿದ್ದಾರೆ.

ಇನ್ನೊಂದೆಡೆ, ಮಡೆನೂರು ಮನುದ್ದು ಎನ್ನಲಾದ ಆಡಿಯೋ ಕೇಳಿದವರು ಆತನ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ. ಕಾಮಿಡಿ ಕಿಲಾಡಿಗಳು ಶೋನ ಯಶಸ್ಸು ಈತನ ಅಹಂಕಾರ ತಲೆಯೇರುವಂತೆ ಮಾಡಿದೆ. ಹಿರಿಯರಿಗೆ ಗೌರವ ಕೊಡುವುದನ್ನು ಮೊದಲು ಕಲಿಯದವರು ಖಂಡಿತ ಏಳಿಗೆ ಹೊಂದುವುದಿಲ್ಲ ಎನ್ನುವ ಅಭಿಪ್ರಾಯ ವ್ಯಕ್ತ ಆಗುತ್ತಿದೆ.

Comments are closed.