Chikkamagaluru: ಚಿಕ್ಕಮಗಳೂರಲ್ಲಿ ಬಿಜೆಪಿ ಬಾಗಿನ ನಿರಾಕರಣೆ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್

Chikkamagaluru: ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರ ಜೊತೆ ಬೆಳಗಾವಿ ಅಧಿವೇಶನದಲ್ಲಿ ನಡೆದ ಗಲಾಟೆಯ ನಂತರ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮೊದಲ ಬಾರಿಗೆ ಚಿಕ್ಕಮಗಳೂರು ನಗರಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಬಾಗಿನ ನೀಡಲು ಮುಂದಾಗಿದ್ದು, ಇದನ್ನು ತಿಳಿದು ಲಕ್ಷ್ಮೀ ಹೆಬ್ಬಾಳ್ಕರ್ ಅವರು ಕಾರು ನಿಲ್ಲಿಸದೆ ತೆರಳುವ ಮೂಲಕ ಬಾಗಿನವನ್ನು ನಿರಾಕರಣೆ ಮಾಡಿದ್ದಾರೆ.

ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಬಾಗಿನ ನೀಡಲು ಬಂದಿದ್ದಾರೆ ಎಂದು ತಿಳಿದ ಸಚಿವೆ ಕಾರು ನಿಲ್ಲಿಸದೆ ತೆರಳಿ ಬಾಗಿನ ನಿರಾಕರಣೆ ಮಾಡಿದರು.
ಶನಿವಾರ ಲಕ್ಷ್ಮೀ ಹೆಬ್ಬಾಳ್ಕರ್ ಲಿಂಗಾಯತ ಸಮಾಜ ಆಯೋಜನೆ ಮಾಡಿದ್ದ ರೇಣುಕಾಚಾರ್ಯ ಜಯಂತಿಯಲ್ಲಿ ಭಾಗವಹಿಸಲು ನಗರಕ್ಕೆ ಭೇಟಿ ನೀಡಿದ್ದು, ಆ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತೆಯರು ಅರಸಿನ, ಕುಂಕುಮ, ಹೂ, ಕಾಯಿ, ಎಲೆ, ಅಕ್ಕಿ ಬೆಲ್ಲ, ಬಾಳೆಹಣ್ಣು, ಲಕ್ಷ್ಮೀ ವಿಗ್ರಹ ಹಿಡಿದು ಪ್ರವಾಸಿ ಮಂದಿರದ ಗೇಟ್ ಬಳಿ ಮೂರು ಗಂಟೆಗೂ ಹೆಚ್ಚು ಹೊತ್ತು ಕಾದಿದ್ದರು. ಆದರೆ ಸಚಿವೆ ಕಾರಿನಿಂದ ಇಳಿಯದೆ ಸೀದಾ ಹೋಗಿದ್ದಾರೆ.
ʼಬಾಗಿನ ಬಿಟ್ಟು ಹೋಗಿದ್ದಾರೆ, ಇದು ಅವರಿಗೆ ಶೋಭೆ ತರುವುದಿಲ್ಲʼ ಎಂದು ಬಿಜೆಪಿ ಕಾರ್ಯಕರ್ತೆಯರು ಅಸಮಾಧಾನಗೊಂಡು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ರೀತಿ ಅವರಿಗೂ ಕುಂಕುಮ ಕಂಡರೆ ಭಯ ಇರಬಹುದು ಎಂದು ನಗರಸಭೆ ಸದಸ್ಯೆ ಕವಿತಾ ಶೇಖರ್ ಹೇಳಿದರು.
ಸದನದಲ್ಲಿ ಮರ್ಯಾದೆ ಕಳೆದ ಮಾಡಬಾರದ ಅವಮಾನ ಮಾಡಿದ್ದಾರೆ. ಈಗ ಸೋಗಿನ ಬಾಗಿನದ ಅವಶ್ಯಕತೆ ನನಗೆ ಇಲ್ಲ ಎಂದು ಲಕ್ಷ್ಮೀಹೆಬ್ಬಾಳ್ಕರ್ ಹೇಳಿದ್ದಾರೆ.
Comments are closed.