UP: ಗಮನಿಸದೆ ಕಸದ ರಾಶಿ ಸುರಿದ ಪೌರ ಸಿಬ್ಬಂದಿ – ಮರದಡಿ ನಿದ್ದೆ ಮಾಡುತ್ತಿದ್ದ ವ್ಯಕ್ತಿ ಮೃತ್ಯು!!

UP: ಮರದಡಿ ನಿದ್ದೆ ಮಾಡುತ್ತಿದ್ದ 45 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರ ಮೇಲೆ ಪೌರ ಸಿಬ್ಬಂದಿ ಕಸದ ರಾಶಿ ಸುರಿದ ಪರಿಣಾಮ ನಿದ್ರಿಸುತ್ತಿದ್ದ ವ್ಯಕ್ತಿ ಕಸದ ರಾಶಿಯಡಿ ಸಿಲುಕಿ ಮೃತಪಟ್ಟ ವಿಚಿತ್ರ ಘಟನೆ ನಡೆದಿದೆ.
ಹೌದು, ಸುನಿಲ್ ಕುಮಾರ್ ಪ್ರಜಾಪತಿ ಎಂಬುವವರು ವಿಶ್ರಾಂತಿಗಾಗಿ ಮರದ ಕೆಳಗಡೆ ಮಲಗಿದ್ದರು. ಈ ವೇಳೆ ಉತ್ತರ ಪ್ರದೇಶದ ಬರೇಲಿ ಮಹಾನಗರ ಪಾಲಿಕೆಯ ಪೌರಕಾರ್ಮಿಕರು ಒಳಚರಂಡಿಯಿಂದ ತೆಗೆದಿದ್ದ ಹೂಳು ಮತ್ತು ಕಸವನ್ನು ಟ್ರಾಲಿಯಲ್ಲಿ ತಂದು ಸುನಿಲ್ ಕುಮಾರ್ ಪ್ರಜಾಪತಿ ಮೇಲೆ ಸುರಿದ ಪರಿಣಾಮ ಅವರು ಸ್ಥಳದಲ್ಲಿ ಮೃತಪಟ್ಟಿದ್ದಾರೆ.
ಬರೇಲಿ ನಗರದ ಬರದಾರಿ ಪ್ರದೇಶದಲ್ಲಿ ಈ ದುರಂತ ಸಂಭವಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಇದು ಅಸಹಜ ಸಾವು ಎನ್ನುವುದನ್ನು ಅಟಾಪ್ಸಿ ವರದಿ ದೃಢಪಡಿಸಿದೆ. ಇದು ನಿರ್ಲಕ್ಷ್ಯದ ಪ್ರಕರಣ ಎಂದು ಸರ್ಕಲ್ ಅಧಿಕಾರಿ ಪಂಕಜ್ ಶ್ರೀವಾಸ್ತವ ಹೇಳಿದ್ದಾರೆ.
ಇನ್ನು ಪೊಲೀಸರ ಪ್ರಕಾರ, ಗುರುವಾರ ಮಧ್ಯಾಹ್ನ ಕುಡಿದ ಅಮಲಿನಲ್ಲಿದ್ದ ಶಾಂತಿಪುರದ ಸುನೀಲ್ ಕುಮಾರ್ ಪ್ರಜಾಪತಿ (45) ತನ್ನ ಮನೆಯ ಬಳಿಯ ಸ್ಮಶಾನದ ಬಳಿ ಇದ್ದ ಮರದ ನೆರಳಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ. ಈ ವೇಳೆ ನಯೀಮ್ ನೇತೃತ್ವದ ಪೌರಕಾರ್ಮಿಕರ ತಂಡವು ಕೆಸರು ತುಂಬಿದ ಟ್ರ್ಯಾಕ್ಟರ್-ಟ್ರಾಲಿಯನ್ನು ಅವರ ಮೇಲೆ ಸುರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Comments are closed.