Mysore Pak: ಪಾಕಿಸ್ತಾನದ ಮೇಲಿನ ಕೋಪಕ್ಕೆ ‘ಮೈಸೂರು ಪಾಕ್’ ಹೆಸರು ಬದಲು – ಹೊಸ ಹೆಸರೇನು ಗೊತ್ತೆ?

Share the Article

Mysore Pak: ಪಾಕಿಸ್ತಾನದ ವಿರುದ್ಧ ದೇಶದ ಜನರ ಕೋಪ ಕಡಿಮೆಯಾಗುತ್ತಿಲ್ಲ. ಇದರ ಪರಿಣಾಮ ರಾಜಸ್ಥಾನದ ಜೈಪುರದಲ್ಲಿ ‘ಪಾಕ್‌’ ಎಂಬ ಹೆಸರುಳ್ಳ ಕರ್ನಾಟಕದ ಪ್ರಸಿದ್ಧ ಸಿಹಿತಿನಿಸು ‘ಮೈಸೂರು ಪಾಕ್‌’ ಸೇರಿ ಹಲವು ಸಿಹಿ ಖಾದ್ಯಗಳ ಹೆಸರನ್ನೇ ಬದಲಿಸಲಾಗಿದೆ!

ಹೌದು, ರೈತರು ಪಾಕಿಸ್ತಾನಕ್ಕೆ ರಫ್ತಾಗುತ್ತಿದ್ದ ಆಹಾರ ಪದಾರ್ಥಗಳನ್ನು ಸ್ಥಗಿತಗೊಳಿಸಿದರೆ, ವ್ಯಾಪಾರಸ್ಥರು ವ್ಯಾಪಾರ ಸಂಬಂಧವನ್ನೇ ಕಡಿತಗೊಳಿಸಿದ್ದಾರೆ. ಇದೀಗ ರಾಜಸ್ಥಾನದ ಸ್ವೀಟ್ ಶಾಪ್ ವಿನೂತನ ರೀತಿಯಲ್ಲಿ ‘ಪಾಕ್’ ವಿರುದ್ಧ ಆಕ್ರೋಶ ಹೊರಹಾಕಿದ್ದು ಜೈಪುರದ ಅಂಗಡಿ ಮಾಲೀಕರು ‘ಪಾಕ್‌’ ಹೆಸರಿರುವ ತಿನಿಸುಗಳ ಹೆಸರನ್ನೇ ಬದಲಾಯಿಸಿದ್ದಾರೆ. ಅದರಲ್ಲೂ ಕರ್ನಾಟಕದ ಮೈಸೂರಿನ ಪ್ರಸಿದ್ಧ ‘ಮೈಸೂರು ಪಾಕ್’ ಹೆಸರನ್ನೂ ಕೂಡ ಬದಲಾಯಿಸಲಾಗಿದೆ.

ಹೀಗಾಗಿ, ಇಲ್ಲಿ ಮೈಸೂರು ಪಾಕ್ (Mysore Pak) ಮೈಸೂರು ಶ್ರೀಯಾಗಿ (Mysore Shree) ಬದಲಾಗಿದೆ. “ನಾವು ‘ಪಾಕ್’ ಪದವನ್ನು ನಮ್ಮ ಸಿಹಿತಿಂಡಿಗಳ ಹೆಸರುಗಳಿಂದ ತೆಗೆದುಹಾಕಿದ್ದೇವೆ. ನಾವು ‘ಮೋತಿ ಪಾಕ್’ ಅನ್ನು ‘ಮೋತಿ ಶ್ರೀ’ ಎಂದು, ‘ಗೋಂದ್ ಪಾಕ್’ ಅನ್ನು ‘ಗೋಂದ್ ಶ್ರೀ’ ಎಂದು, ‘ಮೈಸೂರು ಪಾಕ್’ ಅನ್ನು ‘ಮೈಸೂರು ಶ್ರೀ’ ಎಂದು ಮರುನಾಮಕರಣ ಮಾಡಿದ್ದೇವೆ” ಎಂದು ಅಂಗಡಿಯವರು ತಿಳಿಸಿದ್ದಾರೆ.

Comments are closed.