Ramya: ಮೈಸೂರ್ ಸ್ಯಾಂಡಲ್ ಗೆ ತಮನ್ನಾ ರಾಯಭಾರಿ – ನಟಿ ರಮ್ಯಾ ಆಕ್ರೋಶ

Share the Article

 

Ramya: ಕರ್ನಾಟಕ ಸರ್ಕಾರದ ಅಧೀನದಲ್ಲಿರುವ ಕರ್ನಾಟಕ ಸೋಪ್ಸ್ ಆ್ಯಂಡ್ ಡಿಟರ್ಜೆಂಟ್ ಲಿಮಿಟೆಡ್‌ (KSDL) ಉತ್ಪನ್ನಗಳಿಗೆ ನೂತರ ರಾಯಭಾರಿಯಾಗಿ ನಟಿ ತಮನ್ನಾ ಭಾಟಿಯಾ (Tamanna Bhatia) ಅವರನ್ನು ನೇಮಕ ಮಾಡಲಾಗಿದೆ. ತಮನ್ನಾ ಬದಲು ಕನ್ನಡದವರನ್ನೇ (Sandalwood) ಆಯ್ಕೆ ಮಾಡಿಕೊಳ್ಳಬಹುದಿತ್ತಲ್ಲ ಕನ್ನಡ ಪರ ಸಂಘಟನೆಗಳು ಕೂಡ ಆಕ್ರೋಶ ವ್ಯಕ್ತಪಡಿಸಿದೆ. ಈ ಬೆನ್ನಲ್ಲೇ ನಟಿ ರಮ್ಯಾ ಕೂಡ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಹೌದು, ಕನ್ನಡದಲ್ಲೇ ಸಾಕಷ್ಟು ನಟ ನಟಿಯರು ಇರುವಾಗ ಹೊರಗಿನವರ ಆಯ್ಕೆ ಯಾಕೆ ಎಂದು ಹೋರಾಟ ನಡೆಯುತ್ತಿದೆ. ಇದರ ಬೆನ್ನಲ್ಲೇ ಸರ್ಕಾರದ ನಡೆ ವಿರುದ್ದ ಸ್ಯಾಂಡಲ್‌ವುಡ್ ಕ್ವೀನ್ ನಟಿ ರಮ್ಯಾ ಆಕ್ರೋಶ ಹೊರಹಾಕಿದ್ದು, ಮೈಸೂರು ಸ್ಯಾಂಡಲ್‌ವುಡ್ ಸೋಪ್‌ಗೆ ಪ್ರತಿಯೊಬ್ಬ ಕನ್ನಡಿಗ ರಾಯಭಾರಿ. ಮೈಸೂರು ಸ್ಯಾಂಡಲ್ ಸೋಪ್ ಬಳಸುವ ಪ್ರತಿಯೊಬ್ಬರು ರಾಯಭಾರಿಯಾಗಿದ್ದಾರೆ. ಆದರೆ ತಮನ್ನಾಗೆ ಕೋಟಿ ಕೋಟಿ ರೂಪಾಯಿ ಕೊಟ್ಟು ರಾಯಭಾರಿ ಮಾಡಿಕೊಂಡಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ.

 

ಅಲ್ಲದೆ ಈಗ ಯಾವುದೇ ಉತ್ಪನ್ನಗಳನ್ನು ಪ್ರಚಾರ ಮಾಡಲು ಹಲವು ದಾರಿಗಳಿವೆ. ಪ್ರತಿಯೊಬ್ಬರಿಗೆ ಅರ್ಥಪೂರ್ಣವಾಗಿ ಮಾಹಿತಿ ನೀಡಲು ಸುಲಭ ಮಾರ್ಗಗಳಿವೆ. ಇದಕ್ಕೆ ಹಳೇ ಕಾಲದಲ್ಲಿರುವ ಪದ್ಧತಿಯ ಪ್ರಚಾರ ರಾಯಭಾರಿಯೇ ಬೇಕಾಗಿಲ್ಲ. ತೆರಿಗೆದಾರರ ದುಡ್ಡನ್ನು ಪ್ರಚಾರ ರಾಯಭಾರಿಗೆ ಕೊಡುವುದು ತಪ್ಪು. ಈಗ ಜಮಾನ ಬದಲಾಗಿದೆ. ಸೆಲೆಬ್ರೆಟಿಗಳನ್ನು ನೋಡಿ ಕಣ್ಮುಚ್ಚಿ ಉತ್ಪನ್ನ ಖರೀದಿಸುವ ಕಾಲವಲ್ಲ. ಉತ್ಪನ್ನ ಉತ್ತಮವಾಗಿದ್ದರೆ ಜನರು ಖರೀದಿಸಿದ್ದಾರೆ. ಮೈಸೂರು ಸ್ಯಾಂಡಲ್ ಸೋಪ್ ಉತ್ಪನ್ನ ಅತ್ಯುತ್ತಮ ಗುಣಮಟ್ಟ ಕಾಯ್ದುಕೊಂಡಿದೆ. ಇದಕ್ಕೆ ಅತೀ ದೊಡ್ಡ ಇತಿಹಾಸವೂ ಇದೆ. ಮೈಸೂರು ಸ್ಯಾಂಡಲ್ ಸೋಪ್‌ಗೆ ಘನತೆ, ಜನಪ್ರಿಯತೆ ಎರಡೂ ಇದೆ. ಮೈಸೂರು ಸ್ಯಾಂಡಲ್ ಸೋಪ್‌ಗೆ ಪ್ರತಿಯೊಬ್ಬ ಕನ್ನಡಿಗರೇ ರಾಯಭಾರಿ ಎಂದು ರಮ್ಯಾ ಹೇಳಿದ್ದಾರೆ

 

 ಇಷ್ಟೇ ಅಲ್ಲದೆ ದೊಡ್ಡ ದೊಡ್ಡ ಉತ್ನನ್ನಕ್ಕೆ ಯಾರೂ ಬ್ರ್ಯಾಂಡ್ ಅಂಬಾಸಿಡರ್ ಇಲ್ಲ. ಆಯಪಲ್‌ಗೆ ಯಾರೂ ಬ್ರ್ಯಾಂಡ್ ಅಂಬಾಸಿಡರ್ ಇಲ್ಲ. ಆದರೆ ಆಯಪಲ್ ಯಶಸ್ವಿಯಾಗಿ ಮಾರುಕಟ್ಟೆಲ್ಲಿದೆ. ಹೀಗಾಗಿ ಬ್ರ್ಯಾಂಡ್ ಅಂಬಾಸಿಡರ್ ಮೂಲಕ ಜನಪ್ರಿಯತೆ, ಮಾರಾಟ ಹೆಚ್ಚಿಸಿಕೊಳ್ಳುವ ಕಾಲ ಇದಲ್ಲ ಎಂದು ರಮ್ಯಾ ಹೇಳಿದ್ದಾರೆ.

Comments are closed.