Puttur: ಪುತ್ತೂರು: ಕಾರು ಸ್ಕಿಡ್ ಆಗಿ ತೋಟಕ್ಕೆ ಪಲ್ಟಿ

Puttur: ಪೂತ್ತೂರಿನಿಂದ ಕಾಣಿಯೂರು ಕಡೆಗೆ ಸಂಚರಿಸುತ್ತಿದ್ದ ಮಾರುತಿ ಎರ್ಟಿಗಾ ಕಾರೊಂದು ಕಾಣಿಯೂರು-ಸುಬ್ರಹ್ಮಣ್ಯ ಮುಖ್ಯರಸ್ತೆಯ ಗಡಿಪಿಲದಲ್ಲಿರುವ ಕರೆಮನೆ ಕಟ್ಟೆ ಎಂಬ ಸ್ಥಳದ ಸಮೀಪ ಅಪಘಾತಕ್ಕೀಡಾಗಿರುವ ಘಟನೆ ಕುರಿತು ವರದಿಯಾಗಿದೆ. ಮೇ 24 ರಂದು ಬೆಳಿಗ್ಗೆ ಈ ಘಟನೆ ನಡೆದಿದೆ.
ಚಾಲಕ ಕಾರನ್ನು ಮುಖ್ಯ ರಸ್ತೆಯಿಂದ ಪಕ್ಕಕ್ಕೆ ಇಳಿಸುವ ಪ್ರಯತ್ನದಲ್ಲಿದ್ದಾಗ, ಕಾರು ನಿಯಂತ್ರಣ ತಪ್ಪಿದೆ. ನಂತರ ತೋಟಕ್ಕೆ ಉರುಳಿಬಿದ್ದಿದೆ.
ಚಾಲಕ ಎದುರಿನಿಂದ ಬರುತ್ತಿದ್ದ ವಾಹನಕ್ಕೆ ದಾರಿ ಕೊಡಲು ಹೋಗಿ ಕಾರನ್ನು ರಸ್ತೆಯ ಅಂಚಿಗೆ ತೆಗೆದುಕೊಂಡು ಹೋಗಿದ್ದಾನೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಕಾರು ಸ್ಕಿಡ್ ಆಗಿ ರಸ್ತೆ ಬದಿಯಲ್ಲಿದ್ದ ತೋಟಕ್ಕೆ ಬಿದ್ದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರಿಗೆ ಯಾರಿಗೂ ಗಾಯವಗಿಲ್ಲ ಎನ್ನಲಾಗಿದೆ.
Comments are closed.