Obscene Videos: ಬಿಕಿನಿ ಬಟ್ಟೆ ತೊಟ್ಟು ಗಂಡ ಅಶ್ಲೀಲ ವಿಡಿಯೋ ಮಾಡ್ತಾನೆ: ವೈದ್ಯ ಗಂಡನ ವಿರುದ್ಧ ಪತ್ನಿಯ ಆರೋಪ

Share the Article

Obscene Videos: ಉತ್ತರ ಪ್ರದೇಶದಲ್ಲಿ ಹಣಕ್ಕಾಗಿ ಗಂಡನೋರ್ವ ತೃತೀಯ ಲಿಂಗಿ ಮಹಿಳೆಯಂತೆ ನಟಿಸಿ ಅಶ್ಲೀಲ ವಿಡಿಯೋಗಳನ್ನು ಮಾಡುತ್ತಾನೆ ಎಂದು ಪತ್ನಿ ಆರೋಪ ಮಾಡಿದ್ದಾರೆ. ನನ್ನ ಗಂಡ ತಲೆಗೆ ವಿಗ್‌ ಹಾಗೂ ತುಂಡುಡುಗೆ ತೊಟ್ಟು ಇತರ ಪುರುಷರ ಜೊತೆ ಸೇರಿ ಅಶ್ಲೀಲ ವಿಡಿಯೋಗಳನ್ನು ಮಾಡಿ ಆನ್‌ಲೈನ್‌ ಫ್ಲಾಟ್‌ಫಾರ್ಮ್‌ಗಳಲ್ಲಿ ಅಪ್‌ಲೋಡ್‌ ಮಾಡುತ್ತಿದ್ದಾನೆ ಎಂದು ಆರೋಪ ಮಾಡಿದ್ದಾರೆ.

ಉತ್ತರ ಪ್ರದೇಶದ ಸಂತ ಕಬೀರ್‌ನಗರದಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಸರಕಾರಿ ವೈದ್ಯ ಡಾ.ವರುಣೇಶ್‌ ದುಬೆ ಎಂಬವರ ಪತ್ನಿ ಸಿಂಪಿ ಪಾಂಡೆ ತನ್ನ ಗಂಡನ ಮೇಲೆ ಗಂಭೀರ ಆರೋಪವನ್ನು ಮಾಡಿದ್ದಾರೆ. ದಾಂಪತ್ಯ ದ್ರೋಹ, ನಿಂದನೆ, ಮಾನಸಿಕ ಕಿರುಕುಳದ ಆರೋಪದಡಿಯಲ್ಲಿ ಪತಿಯ ವಿರುದ್ಧ ಎಫ್‌ಐಆರ್‌ ದಾಖಲು ಮಾಡಿದ್ದಾರೆ.

ಡಾಕ್ಟರ್‌ ಗಂಡ ಸರಕಾರಿ ವಸತಿ ಗೃಹದಲ್ಲಿ ತಲೆಗೆ ವಿಗ್‌, ತುಂಡುಡುಗೆ ತೊಟ್ಟು ತೃತೀಯ ಲಿಂಗಿ ಮಹಿಳೆಯಂತೆ ನಟಿಸುತ್ತಾ ಇತರ ಪುರುಷರ ಜೊತೆ ಸೇರಿ ಅಶ್ಲೀಲ ವಿಡಿಯೋಗಳನ್ನು ಮಾಡಿ, ಹಣಕ್ಕಾಗಿ ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡುತ್ತಿದ್ದಾನೆ ಎಂದು ಪತ್ನಿ ಆರೋಪ ಮಾಡಿದ್ದಾರೆ.

ಇತ್ತ ಕಡೆ ಪತ್ನಿಯ ಆರೋಪಗಳನ್ನು ಪತಿ ನಿರಾಕರಿಸಿದ್ದಾರೆ. ಡಾ.ವರುಣೇಶ್‌ ದುಬೆ ಪ್ರತಿ ದೂರು ದಾಖಲಿಸಿದ್ದು, ನನ್ನ ಹೆಸರನ್ನು ಹಾಳು ಮಾಡುವ ಸಲುವಾಗಿ ಇದನ್ನು ಮಾಡಲಾಗಿದ್ದು, ಇದು ನಿಜವಲ್ಲ. ನನ್ನ ಪತ್ನಿ ಫೇಕ್‌ ವಿಡಿಯೋ ಆಕೆನೇ ಸೃಷ್ಟಿ ಮಾಡಿದ್ದಾರೆ. ನನ್ನ ಪತ್ನಿಯ ಸಂಬಂಧಿ ಸಾಫ್ಟ್‌ವೇರ್‌ ಇಂಜಿನಿಯರ್‌ ಅವರ ಸಹಾಯದಿಂದ ಡೀಪ್‌ ಫೇಕ್‌ ವಿಡಿಯೋ ಮಾಡಿ ನನ್ನ ಹೆಸರನ್ನು ಹಾಳು ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಆರೋಪ ಮಾಡಿದ್ದಾರೆ.

Comments are closed.