Liquor Price Hike: ಮೇ 29 ರಂದು ಮದ್ಯದಂಗಡಿ ಬಂದ್‌

Share the Article

Liquor Price Hike: ದರ ಏರಿಕೆ ಮತ್ತು ಪರವಾನಗಿ ದರ ಹೆಚ್ಚಳ ವಿರೋಧ ಮಾಡಿ ಈ ತಿಂಗಳು 29 ರಿಂದ ಕರ್ನಾಟಕದಾದ್ಯಂತ ಮದ್ಯದಂಗಡಿ ಬಂದ್‌ ಮಾಡಲು ರಾಜ್ಯದ ಮದ್ಯ ಮಾರಾಟಗಾರರು ತೀರ್ಮಾನ ಮಾಡಿದ್ದಾರೆ.

ಮದ್ಯ ಮಾರಾಟಗಾರರ ಸಂಘ ಸಭೆ ಕರೆದು ಸಮಾಲೋಚನೆ ಮಾಡಿದೆ. ಮದ್ಯ ಮಾರಾಟಗಾರರು ಈ ತಿಂಗಳು 29 ರಿಂದ ಬಾರ್‌ ಆಂಡ್‌ ರೆಸ್ಟೋರೆಂಟ್‌, ವೈನ್‌ಸ್ಟೋರ್‌ ಕ್ಲೋಸ್‌ ಮಾಡಲು ತೀರ್ಮಾನ ಮಾಡಿದ್ದಾರೆ ಎಂದು ರಾಜ್ಯ ಮದ್ಯ ಮಾರಾಟಗಾರರ ಸಂಘದ ಉಪಾಧ್ಯಕ್ಷ ಕರುಣಾಕರ್‌ ಹೆಗ್ಡೆ ತಿಳಿಸಿದ್ದಾರೆ.

ನಿರಂತರ ಮದ್ಯ ದರ ಏರಿಕೆ ಮಾಡುವುದು ಮತ್ತು ಮದ್ಯ ಮಾರಾಟದ ಲೈಸೆನ್ಸ್‌ ದರ ಏರಿಕೆ ಖಂಡಿಸಿ ರಾಜ್ಯ ಮದ್ಯ ಮಾರಾಟಗಾರರು ಬಂದ್‌ಗೆ ನಿರ್ಧಾರ ಮಾಡುತ್ತಿದ್ದು, ಇದಕ್ಕೆ ಸರಕಾರ ಯಾವ ಕ್ರಮ ಕೈಗೊಳ್ಳಲಿದೆ ಎಂಬುವುದನ್ನು ನೋಡಬೇಕಿದೆ.

Comments are closed.