ಅಮೆರಿಕಾದ TAMEST ಗೆ ಭಾರತದ ಗಣೇಶ್ ಠಾಕೂರ್ ಅಧ್ಯಕ್ಷ

Share the Article

ಹೂಸ್ಟನ್: ಅಮೆರಿಕ ಮೂಲದ ಪ್ರತಿಷ್ಠಿತ ‘ ಟೆಕ್ಸಾಸ್ ಅಕಾಡೆಮಿ ಆಫ್ ಮೆಡಿಸಿನ್, ಇಂಜಿನಿಯರಿಂಗ್, ಸೈನ್ಸ್ ಅಂಡ್ ಟೆಕ್ನಾಲಜಿಯ (TAMEST) ಅಧ್ಯಕ್ಷರಾಗಿ ಭಾರತ ಮೂಲದ ಪ್ರೊ.ಗಣೇಶ್ ಠಾಕೂರ್ ಅವರು ನೇಮಕಗೊಂಡಿದ್ದಾರೆ.

ಪ್ರಸ್ತುತ ಇವರು ಹೂಸ್ಟನ್ ನ ‘ಯೂನಿವರ್ಸಿಟಿ ಆಫ್ ಹೂಸ್ಟನ್’ ನಲ್ಲಿ ಪೆಟ್ರೋಲಿಯಂ ಸೈನ್ಸ್ ನ ಪ್ರಾಧ್ಯಾಪಕರಾಗಿದ್ದು, 2 ವರ್ಷಗಳ ಅವಧಿಗೆ TAMEST ಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ ಅನಂತರ ನಿರ್ಗಮಿಸಲಿದ್ದಾರೆ. ಗುಜರಾತ್ ಮೂಲದವರಾಗಿರುವ ಗಣೇಶ್ ಠಾಕೂರ್ 2026ರ ಜನವರಿಯಲ್ಲಿ ಸ್ಯಾ0ಟ್ ಆಂಟೋನಿಯೋದಲ್ಲಿ ನಡೆಯಲಿರುವ ಹವಾಮಾನ ಕುರಿತಾದ ಜಾಗತಿಕ ಶೃಂಗ ಸಭೆಯಲ್ಲಿ ಅಧ್ಯಕ್ಷತೆ ವಹಿಸಲಿದ್ದಾರೆ.

ಈ ಒಂದು TAMEST ಅಮೆರಿಕದ ಪ್ರತಿಷ್ಠಿತ ಪ್ರಾಧ್ಯಾಪಕರು, ಸಂಶೋಧಕರು, ವೈದ್ಯರು, ತಂತ್ರಜ್ಞರು ಹಾಗೂ ನೊಬೆಲ್ ಪುರಸ್ಕೃತರನ್ನು ಒಳಗೊಂಡಿರುವ ಸಂಸ್ಥೆಯಾಗಿದ್ದು, ಇದು 350 ಸದಸ್ಯರು ಹಾಗೂ 8 ನೋಬೆಲ್ ಪುರಸ್ಕೃತರನ್ನು ಒಳಗೊಂಡಿದೆ.

Comments are closed.